ಕೊನೆಯ ಓವರ್‌ನವರೆಗೂ ರೋಚಕತೆಯಿಂದ ಕೂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 6 ರನ್‌ಗಳಿಂದ ರೋಚಕವಾಗಿ ಗೆದ್ದು ಬೀಗಿದೆ
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ತಂಡವು 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಬಳಿಕ ಈ ಗುರಿಯನ್ನು ಸಾಧಿಸಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ, 6 ರನ್‌ಗಳ ಅಂತರದಿಂದ ಸೋಲು ಒಪ್ಪಿಕೊಂಡಿದೆ.
ಕೊನೆಯ ಓವರ್‌ನಲ್ಲಿ ಚೆನ್ನೈಗೆ ಗೆಲ್ಲಲು 20 ರನ್‌ಗಳ ಅವಶ್ಯಕತೆ ಇದ್ದಾಗ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಕೊನೆಯ ಓವರ್ ಎಸೆದ ಸಂದೀಪ್ ಶರ್ಮಾ ಕೇವಲ 14 ರನ್ ಮಾತ್ರ ನೀಡಿ, ತಮ್ಮ ತಂಡದ ಪರ ಹೀರೋ ಎನಿಸಿಕೊಂಡರು. ಕೊನೆಯ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ವಿಕೆಟ್ ಪಡೆದದ್ದು, ಪಂದ್ಯವು ರಾಜಸ್ಥಾನದ ಗೆಲುವಿಗೆ ಕಾರಣವಾಯಿತು. ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಶಿಮ್ರಾನ್ ಹೆಟ್ಮಾಯರ್ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು
The situation 🤯
— IndianPremierLeague (@IPL) March 30, 2025
The catch 🫡
The moment 🔝
🎥 Shimron Hetmyer's match-changing catch 🙇♂️
Scorecard ▶️ https://t.co/V2QijpWpGO#TATAIPL | #RRvCSK | @rajasthanroyals pic.twitter.com/ytuCdERVas
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರುದ್ಧ ನಡೆದಿದ್ದ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 50 ರನ್‌ಗಳ ಅಂತರದಿಂದ ಸೋಲುವ ಮೂಲಕ, ತವರಿನ ಮೈದಾನದಲ್ಲಿ ತೀವ್ರ ಮುಖಭಂಗ ಅನುಭವಿಸಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸುಮಾರು 17 ವರ್ಷಗಳ ನಂತರ ಚೆನ್ನೈನಲ್ಲಿ ಗೆಲುವು ಸಾಧಿಸಿತ್ತು.
ಗುವಾಹಟಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ ಗೆಲುವು ಸಾಧಿಸುವ ಮೂಲಕ ಕೊನೆಗೂ ಈ ಬಾರಿಯ ಸೀಸನ್‌ನ ಮೊದಲ ಗೆಲುವನ್ನು ದಾಖಲಿಸಿಕೊಂಡಿದೆ. ಈವರೆಗೆ ರಾಜಸ್ಥಾನ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಸೋಲು ಅನುಭವಿಸಿತ್ತು.