ಅಮೆರಿಕ ಸಂವಿಧಾನದ ಅನ್ವಯ ಅಲ್ಲಿನ ಅಧ್ಯಕ್ಷರು ಎರಡು ಬಾರಿ ಮಾತ್ರ ರಾಷ್ಟ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯ. ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿಯಲು ಅಲ್ಲಿನ ಸಂವಿಧಾನ ನಿರ್ಬಂಧಿಸುತ್ತದೆ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 3ನೇ ಬಾರಿ ಅಧ್ಯಕ್ಷರಾಗಲು ಇಂಗಿತ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಡೊನಾಲ್ಡ್ ಟ್ರಂಪ್, ಸಂವಿಧಾನ ತಿದ್ದುಪಡಿಗೊಳಿಸಿ ಇದನ್ನು ಕಾರ್ಯಗತಗೊಳಿಸಲು ಹಲವು ವಿಧಾನಗಳಿವೆ. ನಾನು ತಮಾಷೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
“ಹಲವು ಜನರು ನಾನು ಅದನ್ನು ಮಾಡಬೇಕೆಂದು ಬಯಸುತ್ತಾರೆ. ನಾನು ಅವರಿಗೆ ಹೇಳ ಬಯಸುವುದೆಂದರೆ ಇದನ್ನು ಜಾರಿಗೊಳಿಸಲು ಬಹಳ ದೂರ ಕ್ರಮಿಸಬೇಕಿದೆ. ಇದು ಆಡಳಿತದಲ್ಲಿ ಮುಂಚೆಯೆ ಆಗಬೇಕಿತ್ತು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ಮೂರನೇ ಅವಧಿಗೆ ನೀವು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಯಾವುದಾದರೂ ಕಾರ್ಯತಂತ್ರಗಳಿವೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, ‘ಇದನ್ನು ಜಾರಿಗೊಳಿಸಲು ಹಲವು ಮಾರ್ಗಗಳಿವೆ’ ಎಂದು ತಿಳಿಸಿದ್ದಾರೆ.
“ನಾನು ಕಾರ್ಯನಿರ್ವಹಿಸಲು ಇಷ್ಟಪಡುತ್ತೇನೆ, ನಾನು ತಮಾಷೆ ಮಾಡುತ್ತಿಲ್ಲ. ನಾನೊಬ್ಬ ಮಾತ್ರವಲ್ಲ, ಇದರ ಬಗ್ಗೆ ತುಂಬ ಮುಂಚೆಯೆ ಯೋಚಿಸಬೇಕಿತ್ತು” ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಾರಾಕ್ ಒಬಾಮಾ, ಬಿಲ್ ಕ್ಲಿಂಟನ್ ಹಾಗೂ ಜಾರ್ಜ್ ಬುಷ್ ಸತತ 2 ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಎರಡು ಬಾರಿ ಅಧ್ಯಕ್ಷರಾಗಿ ಸಾಧ್ಯವಾಗಿರಲಿಲ್ಲ. ಟ್ರಂಪ್ ಮೊದಲ ಅವಧಿಯ ನಂತರ ಜೋ ಬೈಡನ್ ಅಧ್ಯಕ್ಷರಾಗಿದ್ದರು.
ಅಮೆರಿದ 22ನೇ ತಿದ್ದುಪಡಿಯ ಪ್ರಕಾರ ಮೂರನೇ ಅವಧಿಗೆ ಅಧ್ಯಕ್ಷರಾಗುವಂತಿಲ್ಲ. ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್ 1932ರಿಂದ 1945ರ ಮೂರು ಅವಧಿಯವರೆಗೆ ಅಧ್ಯಕ್ಷರಾದ ನಂತರ ಈ ತಿದ್ದುಪಡಿಯನ್ನು ಅಂಗೀಕರಿಸಲಾಗಿತ್ತು. ಯಾವುದೇ ವ್ಯಕ್ತಿಯನ್ನು ಅಮೆರಿಕದ ಅಧ್ಯಕ್ಷರಾಗಿ ಎರಡು ಬಾರಿಗಿಂತ ಹೆಚ್ಚು ಅವಧಿಗೆ ಆಯ್ಕೆ ಮಾಡಬಾರದು ಎಂದು 22ನೇ ವಿಧಿ ತಿಳಿಸುತ್ತದೆ. 1945ರ ನಂತರ ಯಾವ ಅಧ್ಯಕ್ಷರು ಕೂಡ ಮೂರನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ನಡೆಸಿಲ್ಲ. ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಮಾತ್ರ ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾರಣದಿಂದ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದರು.