ಗದಗ | ಕೋಮುವಾದಿ ಪಕ್ಷ ಹಾಗೂ ಸಂಘಟನೆ ಅಂಬೇಡ್ಕರ್ ಜಯಂತಿ ಆಚರಣೆ ಹಿಂದೆ ರಾಜಕೀಯ ಹುನ್ನಾರ : ಮುತ್ತು ಬಿಳಿಯಲಿ

Date:

Advertisements

“ಏಪ್ರಿಲ್ 14 ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮದಿನ ಆ ದಿನ ಇಡೀ ಜಗತ್ತೆ ಅವರ ಜನ್ಮದಿನವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತದೆ. ಅದರಲ್ಲೂ ದೇಶದ ದಲಿತರ ಪಾಲಿಗೆ ಏಪ್ರಿಲ್ 14 ನೇ ದಿನ ಹಬ್ಬದ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗೆ ಸುಮ್ಮನೆ ನೀವು ಗೂಗಲ್ ನಲ್ಲಿ “word biggest jayanti” ಅಂತ ಸರ್ಚ್ ಮಾಡಿ ನೋಡಿ ಅಲ್ಲಿ ಬರುವ ಉತ್ತರ ಅಂಬೇಡ್ಕರ ಜಯಂತಿ ಕಾಣಸಿಗುತ್ತದೆ. ಇಡೀ ಜಗತ್ತೆ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಬಿಸುವ ಸಂದರ್ಭದಲ್ಲಿ ಒಂದು ಕೋಮುವಾದಿ ಪಕ್ಷದ ಅಭ್ಯರ್ಥಿ ಹಾಗೂ ಒಂದು ಕೋಮುವಾದಿ ಸಂಘಟನೆ ಬಾಬಾಸಾಹೇಬರ ಜಯಂತಿಯನ್ನು ಆಚರಣೆ ಹಿಂದೆ ರಾಜಕೀಯ ಹುನ್ನಾರ ಇದೆ” ಎಂದು ಸಾಮಾಜಿಕ ಹೋರಾಟಗಾರ ಮುತ್ತು ಬಿಳಿಯಲಿ ಆರೋಪಿಸಿದರು.

ಗದಗ ಪಟ್ಟಣದಲ್ಲಿ ಅವರು ಈದಿನ.ಕಾಮ್ ನೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿ, “ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿ ಪರಾಭವಗೊಂಡ ಅನಿಲ್ ಮೆಣಸಿನಕಾಯಿ ಹಾಗೂ ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ಚಟುವಟಿಕೆ ಮಾಡುತ್ತಿರುವ ಶ್ರೀರಾಮ ಸೇನೆ ಜೊತೆಯಾಗಿ ಈ ಭಾರಿ ಜಯಂತಿಯನ್ನು ಆಚರಿಸುತ್ತಿದ್ದು, ಗದುಗಿನ ಎಲ್ಲಾ ದಲಿತ ಸಂಘಟನೆಗಳ ಮುಖಂಡರನ್ನು   ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಕರೆದಿದ್ದಾರೆ” ಎಂದು ಹೇಳಿದರು

“ಮೊದಲು ಶ್ರೀರಾಮ ಸೇನೆಯ ಬಗ್ಗೆ ಎರಡು ಮಾತುಗಳು ಈ ಸಂಘಟನೆ ಉದ್ದೇಶಗಳು ಇವರ ಕಾರ್ಯಚಟುವಟಿಕೆಗಳು ಏನು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ನಾನು ಅದರ ಬಗ್ಗೆ ತಿಳಿಸೊದಿಲ್ಲ. ಈ ವರ್ಷ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ನಾವು ಆಚರಿಸುತ್ತಿದ್ದೆವೆ. ಈ 134 ವರ್ಷಗಳಲ್ಲಿ ಶ್ರೀರಾಮ ಸೇನೆ ಸಂಘಟನೆ ಯಾವತ್ತಿಗೂ ಆಚರಿಸದ ಜಯಂತಿಯನ್ನು ಈ ವರ್ಷ ಏಕೆ ಆಚರಣೆ ಮಾಡುತ್ತಿದೆ…? ಈ ಜಯಂತಿ ಆಚರಣೆಯ ಉದ್ದೇಶವೇನು..? ಎಂದು ಪ್ರಶ್ನಿಸಿದರು.

Advertisements

ಬಾಬಾಸಾಹೇಬ ಅಂಬೇಡ್ಕರರು ಅವರ ಜೀವನದುದ್ದಕ್ಕೂ ಅಸಮಾನತೆ ಸಾರುವ ಹಿಂದುತ್ವದ ವಿರುದ್ಧ ಹೋರಾಟ ಮಾಡಿ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಅನುಯಾಯಿಗಳಿಗೆ ಬೌದ್ಧ ಧಮ್ಮ ಸ್ವಿಕರಿಸಿ ಸಂದೇಶ ಕೊಟ್ಟರು. ಆದರೆ ಶ್ರೀರಾಮ ಸೇನೆ ಸಂಘಟನೆ ಸದಾ ಅಂಬೇಡ್ಕರ್ ಅವರ ವಿಚಾರಗಳನ್ನು ವಿರೋಧಿಸಿ ಹಿಂದುತ್ವದ ಹೆಸರಿನಲ್ಲಿ ಯುವಕರನ್ನ ಹಾಳು ಮಾಡುತ್ತಿದೆ. ಅವರಿಗೆ ಅಕ್ರಮವಾಗಿ ಬಂದೂಕು ತರಬೇತಿಗಳನ್ನು ಕೊಡಿಸಿ, ಅವರನ್ನು ಕೊಲೆಗಾರರನ್ನಾಗಿ ಮಾಡುತ್ತಿದೆ. ‘ಎಲ್ಲಿಯ ಅಂಬೇಡ್ಕರ್ ಎಲ್ಲಿಯ ಶ್ರೀರಾಮ ಸೇನೆ’ ಯಾವತ್ತೂ ಇಲ್ಲದ ಅಂಬೇಡ್ಕರ್ ಅವರ ಮೇಲಿನ ಅಭಿಮಾನ ಈಗ ಬಂದಿದೆ. ಇದರ ಹಿಂದೆ ದೊಡ್ಡ ಹುನ್ನಾರವಿದೆ. ಗದುಗಿನ ದಲಿತ ಸಂಘಟನೆಗಳ ಮುಖಂಡರಿಗೆ ಹಾಗೂ ಯುವಕರಿಗೆ ಇವರ ಮೊಸಳೆ ಕಣ್ಣಿರಿಗೆ ಕರಗದೆ ಎಚ್ಚರದಿಂದ ಇರಬೇಕು” ಎಂದು ಸಲಹೆ ನೀಡಿದರು.

“ಎರಡನೇಯದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಪರಾಭವಗೊಂಡ ಅನಿಲ್ ಮೆಣಸಿನಕಾಯಿ ಅವರಿಗೂ ಕೂಡ ಬಾಬಾ ಸಾಹೇಬರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಸುಮಾರು ದಿನಗಳ ಹಿಂದೆ ಗದಗ ತಾಲೂಕಿನ ಕುರ್ತಕೋಟಿಯಲ್ಲಿ ಬುದ್ಧ.ಬಸವ.ಅಂಬೇಡ್ಕರ ದೇವಸ್ಥಾನ ಮಾಡ್ತಿನಿ ಅಂತ ಹೇಳಿ ಹೋದವರು ಇಂದು ಕಾಣಿಸಿಕೊಂಡಿದ್ದಾರೆ. ಇವರು ಅಂಬೇಡ್ಕರ್ ದೇಗುಲ ಮಾಡಿ ಅವರನ್ನು ದೇವರನ್ನಾಗಿ ಮಾಡಿ ಅವರ ವಿಚಾರಗಳನ್ನು ಕೊಲೆ ಮಾಡುತ್ತಿದ್ದಾರೆ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಹಿಂದುತ್ವ, ದೇವರು, ಧರ್ಮ, ಜಾತಿಯತೆ, ಅಸ್ಪೃಶ್ಯತೆಯ ಬಗ್ಗೆ ಹೋರಾಟಗಳನ್ನು ಮಾಡಿದವರು. ಆದರೆ ಇಲ್ಲಿ ಅನಿಲ್ ಮೆಣಸಿನಕಾಯಿ ಅವರು ಗುಡಿಯನ್ನು ಕಟ್ಟಿಸಿ ಬಾಬಾ ಸಾಹೇಬರ ವಿಚಾರಗಳನ್ನು ಗುಡಿ ಕಟ್ಟಿಸುವ ಮೂಲಕ ಸಮಾಧಿ ಮಾಡುತ್ತಿದ್ದಾರೆ” ಎಂದು ಮುತ್ತು ಬಿಳಿಯಲಿ ಕಿಡಿಕಾರಿದರು.

“ಸ್ವತಃ ಅನಿಲ್ ಮೆಣಸಿನಕಾಯಿ ಅವರು ಗದುಗಿನ ದಲಿತ ಮುಖಂಡರುಗಳಿಗೆ ಫೋನ್ ಮಾಡಿ ನಾವು ‘ಇಲ್ಲಿ ರಾಜಕೀಯ ಮಾಡುವುದಕ್ಕೆ ಜಯಂತಿಯನ್ನು ಆಚರಿಸುತ್ತಿಲ್ಲ, ರಾಜಕೀಯಕ್ಕೂ ಜಯಂತಿಗೂ ಸಂಬಂಧವಿಲ್ಲ’ ಎಂದು ಹೇಳುತ್ತಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ್ ಅದೇ ಗುಡಿ ಗುಂಡಾರಗಳನ್ನು ವಿರೋಧಿಸಿದ್ದರು. ಇವರು ಅದೇ ಗುಡಿ ಗುಂಡಾರಗಳನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಜನರೇ ಈ ಜಯಂತಿ ಆಚರಣೆಯ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ರೂಪಿಸಿದ್ದಾರೆ. ಇದರ ಹಿಂದೆ ಆರ್.ಎಸ್.ಎಸ್ ತುಂಬಾ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಈ ಸಲ ನಾವೂ 400 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದರು. ಆದರೆ ದೇಶದ ದಲಿತರು, ಅಲ್ಪಸಂಖ್ಯಾತರು ಸರಿಯಾದ ಪಾಠ ಕಲಿಸಿದ್ದಾರೆ. ಇನ್ನೇನು ಮನೆಗೆ ಹೋದರು ಅಂದಾಗ ಬಿಹಾರ ನೀತಿಶ್ ಕುಮಾರ, ಆಂಧ್ರದ ಚಂದ್ರಬಾಬು ನಾಯ್ಡು ಅವರು ಬಿ.ಜೆ.ಪಿ  ಯ ಜೀವ ಉಳಿಸಿದರು” ಎಂದು ಹೇಳಿದರು.

“ಇನ್ನೂ ನಮ್ಮ ಕರ್ನಾಟಕದಲ್ಲಿ ದಲಿತರು ಕಾಂಗ್ರೇಸ್ ನ ಗ್ಯಾರಂಟಿ ನೋಡಿ ಮತ ಹಾಕಿಲ್ಲ. ಈ ಬಾರಿಯ ಚುನಾವಣೆ ಸ್ವಾಭಿಮಾನದ ಚುನಾವಣೆ ಆಗಿತ್ತು. ಕೋಮುವಾದಿಗಳನ್ನ ಅಧಿಕಾರದಿಂದ ದೂರ ಇಡಬೇಕು” ಎನ್ನುವ ದೃಷ್ಟಿಯಿಂದ ಕಾಂಗ್ರೇಸ್ ನ್ನು ಅಧಿಕಾರಕ್ಕೆ ತಂದಿದ್ದಾರೆ. ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಿ.ಜೆ.ಪಿ ಹೇಗಾದರೂ ಮಾಡಿ ದಲಿತರನ್ನು ನಮ್ಮೊಂದಿಗೆ ಸೇರಿಸ್ಕೊಬೇಕು. ಮತ್ತೆ ಅಧಿಕಾರ ಹಿಡಿಯಬೇಕೆಂದು ಆರ್.ಎಸ್.ಎಸ್ ಹಾಗೂ ಬಿ.ಜೆ.ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಮೊಸಳೆ ಕಣ್ಣಿರು ಸುರಿಸುತ್ತಿದೆ. ಇವರ ಯಾವ ಆಸೆ ಅಮಿಷುಗಳಿಗೆ ಒಳಗಾಗದೆ. ಬಾಬಾಸಾಹೇಬರ ಸಿದ್ಧಾಂತವನ್ನು ನಾಶಮಾಡಲು ಬಿಡದೆ, ಇವರ ಕೋಮುವಾದಿ ನಾಟಕಗಳನ್ನು ಬಯಲು ಮಾಡೋಣ” ಎಂದು ಮುತ್ತು ಬಿಳಿಯಲಿ ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X