ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀ ಸಂಸ್ಥೆ ಮಾಲೀಕರಾದ ಸುಭಾಷ್ ಚಂದ್ರ ಅವರು ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
‘ನಮ್ಮ ಚಾನಲ್‌ನಿಂದ ದೊಡ್ಡ ಪ್ರಮಾದವಾಗಿದೆ. ನಾವೇ ಶುರು ಮಾಡಿದ ಅಪಪ್ರಚಾರ ಅಭಿಯಾನವನ್ನು ಇತರ ಚಾನಲ್‌ಗಳು ಅನುಸರಿಸಿದರು. ನಮ್ಮ ಸಂಪಾದಕರು ಹಾಗು ವರದಿಗಾರರಿಂದ ಆಗ ದೊಡ್ಡ ಪ್ರಮಾದವಾಗಿದೆ. ನಾನು ನೇರವಾಗಿ ಅದರಲ್ಲಿ ಭಾಗಿಯಾಗಿರಲಿಲ್ಲವಾದರೂ ನಾನು ರಿಯಾ ಚಕ್ರವರ್ತಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇಡೀ ಅಪಪ್ರಚಾರವನ್ನು ಮೊದಲು ಶುರು ಮಾಡಿದ್ದೇ ನಮ್ಮ ಚಾನಲ್ ಎಂದು ಘೋಷಿಸಿದ್ದಾರೆ. ಅದಕ್ಕಾಗಿ ಸ್ವತಃ ಅವರು ಕ್ಷಮೆಯಾಚಿಸಿದ್ದಾರೆ. ತಮ್ಮ ಚಾನಲ್‌ನ ಸಿಬ್ಬಂದಿ ಕೂಡ ಕ್ಷಮೆ ಯಾಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ಇದಕ್ಕೆಲ್ಲ ಕಾರಣವಾಗಿದ್ದು ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ಬಳಿಕ ಸಲ್ಲಿಸಿರುವ ಮುಚ್ಚುವಿಕೆ ವರದಿ. ಅದರಲ್ಲಿ ರಿಯಾ ಚಕ್ರಬರ್ತಿ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯ ಇಲ್ಲ. ಆಕೆ ಇದರಲ್ಲಿ ಯಾವ ರೀತಿಯಲ್ಲೂ ಆರೋಪಿಯಲ್ಲ ಎಂದು ಹೇಳಲಾಗಿತ್ತು.
ಸುಭಾಷ್ ಚಂದ್ರ ಅವರು 1992ರಲ್ಲಿ ಝೀ ಸಂಸ್ಥೆಯನ್ನು ಆರಂಭಿಸಿದ್ದರು. ನಂತರದಲ್ಲಿ ಬಿಜೆಪಿ ಬೆಂಬಲದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಸುಭಾಷ್ ಅವರನ್ನು ಪುನಾರಾಯ್ಕೆ ಮಾಡದ ಕಾರಣ ಸುಶಾಂತ್ ಸಿಂಗ್ ಪ್ರಕರಣದಲ್ಲಿ ತಮ್ಮ ಚಾನಲ್‌ನಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದರು ಎಂದು ಹೇಳಲಾಗುತ್ತಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರು 2020ರಲ್ಲಿ ಮುಂಬೈನ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದರು. ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ವರದಿ ನೀಡಿದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಘಟನೆ ನಡೆದು 5 ವರ್ಷದ ನಂತರ ಸಿಬಿಐ ಸುಶಾಂತ್ ಸಿಂಗ್ ಅವರದು ಕೊಲೆ ಎನ್ನುವುದಕ್ಕೆ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಲಿಲ್ಲ ಎಂಬ ಕಾರಣದಿಂದ ಮುಚ್ಚುವಿಕೆ ವರದಿ ಸಲ್ಲಿಸಿದೆ.