ಮೈಸೂರು | ಜೋಡಿ ಕೊಲೆ ಪ್ರಕರಣ; ಒರ್ವನ ಬಂಧನ, ಮತ್ತಿಬ್ಬರಿಗಾಗಿ ಶೋಧ

Date:

Advertisements

ಮೂರು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣ ತಿರುವು ಕಂಡಿದ್ದು, ಕೇವಲ 485 ರೂಪಾಯಿಯಾಗಿ ಈ ಡಬಲ್​ ಮರ್ಡರ್​ ನಡೆದಿದೆ ಎನ್ನಲಾಗಿದೆ.

ಆರೋಪಿ ಅಭಿಷೇಕ್​ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿರುವ ಮಿಸ್ಬಾ ಸಾಮಿಲ್‌ನಲ್ಲಿದ್ದ ಇಬ್ಬರು ಕಾವಲುಗಾರರಾದ ವೆಂಕಟೇಶ (75), ಷಣ್ಮುಗ (65) ಎಂಬುವರ ಹತ್ಯೆ ಮೂರು ದಿನಗಳ ಹಿಂದೆ ನಡೆದಿತ್ತು. ಇವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಈಗ ಪೊಲೀಸರು ಬೇಧಿಸಿದ್ದಾರೆ.

Advertisements

ಕೊಲೆ ಆರೋಪಿ ಅಭಿಷೇಕ್ ಸುಲಿಗೆ,​ ದರೋಡೆ, ಕಳ್ಳತನ, ವಸೂಲಿಯನ್ನೇ ಕಾಯಕ ಮಾಡಿಕೊಂಡಿದ್ದ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಅವನಿಗೆ ಶೋಕಿಗಾಗಿ ಹಣ ಬೇಕಿತ್ತು. ನ್ಯಾಯವಾಗಿ ದುಡಿಯುವುದು ಗೊತ್ತಿಲ್ಲದ ಈತ ತನ್ನ ಸಹಚರರೊಂದಿಗೆ ಸೇರಿ ಕಳ್ಳತನದ ಪ್ಲ್ಯಾನ್ ಹಾಕಿದ್ದ.

ಇಬ್ಬರು ವಾಚ್‌ಮ್ಯಾನ್​ಗಳಿದ್ದ ಸಾಮಿಲ್​​ಗೆ ನುಗ್ಗಿ ಅವರಿಬ್ಬರನ್ನೂ ಬೆದರಿಸಿ ಹಣ ಕೊಡುವಂತೆ ಹೇಳಿದ್ದಾರೆ. ಇಬ್ಬರ ಜೇಬನ್ನೂ ಹುಡುಕಿದಾಗ ಸಿಕ್ಕಿದ್ದು 485 ರೂಪಾಯಿ. ಇದರಿಂದ ಕೋಪಗೊಂಡ ಅಭಿಷೇಕ್ ಮತ್ತು ಸಹಚರರು ಕಾವಲುಗಾರರನ್ನು ಕೊಂದು ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿರಾಡಿಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ; ಕೇಂದ್ರಕ್ಕೆ ಪ್ರಸ್ತಾವನೆ: ಸತೀಶ್‌ ಜಾರಕಿಹೊಳಿ

ಈ ಮರದ ಮಿಲ್​ಗೆ ನಿಜವಾದ ಕಾವಲುಗಾರ ವೆಂಕಟೇಶ್​ ಆಗಿದ್ದ. ಷಣ್ಮುಗ ಬುದ್ಧಿಮಾಂದ್ಯನಾಗಿದ್ದು, ಸದಾ ವೆಂಕಟೇಶ್ ಜತೆಗೇ ಇರುತ್ತಿದ್ದ. ಅವನನ್ನೂ ವಾಚ್​ಮ್ಯಾನ್​ ಎಂದೇ ಪರಿಗಣಿಸಲಾಗಿತ್ತು. ಇವರಿಬ್ಬರೂ ಹತ್ಯೆಯಾಗಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಆರೋಪಿ ಅಭಿಷೇಕ್​​ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X