ಕೌಟುಂಬಿಕ ಕಲಹಕ್ಕೆ ನಾಡ ಬಂದೂಕಿನಿಂದ ಮೂವರ ಹತ್ಯೆ ಮಾಡಿರುವ ಘಟನೆ, ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಮಾಗಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ಜ್ಯೋತಿ (50), ಸಿಂಧು (26), ಹಾಗೂ 7 ವರ್ಷದ ಮಗುವನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹಾಗೆಯೇ, ಮೃತ ಸಿಂಧು ಅವರ ಗಂಡ ಅವಿನಾಶ್ ಎಂಬುವರಿಗೆ ಕಾಲಿಗೆ ಗುಂಡೇಟು ತಗಲಿದೆ.
ಹತ್ಯೆಗೈದ ರತ್ನಾಕರ್ ಎಂಬ ವ್ಯಕ್ತಿ ಕುಟುಂಬ ಕಲಹಕ್ಕೆ ಸ್ವಂತ ಅತ್ತೆ, ನಾದಿನಿ ಹಾಗೂ ತನ್ನ ಸ್ವಂತ ಮಗುವನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಹತ್ಯೆಗೈದಿರುವ ರತ್ನಾಕರ್ ಎಂಬ ವ್ಯಕ್ತಿ, ಸ್ಥಳೀಯ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ, ಆತನ ಹೆಂಡತಿ ಬಿಟ್ಟು ಎರಡು ವರ್ಷಳಾಗಿತ್ತು. ನನ್ನ ಮಗಳು ಓದುತ್ತಿರುವ ಶಾಲೆಯಲ್ಲಿ ನಿನ್ನ ತಾಯಿ ಯಾರು ಎಂದು ಕೇಳುತ್ತಿದ್ದರು, ನನ್ನ ಬಳಿ ಮಗಳು ಕೇಳುತ್ತಿದ್ದಳು. ಏನೂ ಹೇಳದಿದ್ದಾಗ ಮದುವೆಯ ಫೋಟೊ ತೆಗೆದುಕೊಂಡು ಶಾಲೆಯಲ್ಲಿ ತೋರಿಸಿದ್ದಾಳೆ ಎಂದು 47 ಸೆಕೆಂಡು ಸೆಲ್ಫಿ ವೀಡಿಯೋ ಮಾಡಿದ್ದಾನೆ. ನಂತರ ಆರೋಪಿ ಕೂಡ ಮನೆಯ ಹಿಂಭಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅರಣ್ಯ ಅಧಿಕಾರಿಗಳ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಸಾಗುವಾನಿ ಮರ ವಶಕ್ಕೆ
ಈ ಘಟನೆ ಕುರಿತು ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಾಳೆಹೊನ್ನೂರು ಪೊಲೀಸ್ ಠಾಣೆಯ PSI ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
