ಕಂದಕದಲ್ಲಿ ಬಿದ್ದು ಹಸು ಮೃತಪಟ್ಟಿದ್ದ ಸ್ಥಳಕ್ಕೆ ವಡೀಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಸವರಾಜ ಸಜ್ಜನ್ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಚಂದುಲಾಲ್ ಎಇಇ ಹಾಗೂ ವಾಸುದೇವ ಜೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಯಾದಗಿರಿ ಜಿಲ್ಲೆ ವಡಗೇರಿ ತಾಲೂಕಿನ ಮಳ್ಳಳ್ಳಿ ಗ್ರಾಮದ ಮಲ್ಲಪ್ಪ ಹಣಮಂತ ಬಳಿಚಕ್ರ ಎಂಬುವವರ ಹಸು ರಸ್ತೆಯ ಸೇತುವೆ ಕಂದಕಕ್ಕೆ ಬಿದ್ದು ಮೃತಪಟ್ಟಿತ್ತು. ಇದಕ್ಕೆ ಪರಿಹಾರ ನೀಡಿ ಸಮರ್ಪಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದರು.
ಸಾಮಾಜಿಕ ಹೋರಾಟಗಾರರ ಆಗ್ರಹದ ಹಿನ್ನೆಲೆಯಲ್ಲಿ ಈದಿನ.ಕಾಮ್, ‘ಯಾದಗಿರಿ | ಕಂದಕಕ್ಕೆ ಬಿದ್ದು ಹಸು ಸಾವು; ಪರಿಹಾರಕ್ಕೆ ಆಗ್ರಹʼ ಎಂಬ ತಲೆಬರಹಲ್ಲಿ ವರದಿ ಪ್ರಕಟಿಸಿತ್ತು. ಬಳಿಕ ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಇಇ ಚಂದುಲಾಲ್ ಮಾತನಾಡಿ, “ಕಂದಕ ಉಂಟಾಗಿರುವ ಸ್ಥಳಗಳಲ್ಲಿ ಕೂಡಲೇ ಮರ್ಮ್ ಹಾಕಿ ತಗ್ಗು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸುಗಮವಾಗಿ ಓಡಾಡಲು ಅನುಕೂಲ ಮಾಡಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಾಳೆಯೇ ನಾಲ್ಕು ಸಿಡ್ಡಿ ಮತ್ತು ಗುರುಸುಣಿಗಿ ಮಳ್ಳಳ್ಳಿ ಮಾರ್ಗದಲ್ಲಿ ಹದಗೆಟ್ಟಿರುವ ರಸ್ತೆಯ ಅಂದಾಜು ಪಟ್ಟಿ ತಯಾರಿಸಿ ಸ್ಥಳೀಯ ಶಾಸಕ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ವೇಳೆ ದೂರವಾಣಿ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಮಾತನಾಡಿ, ಅಲ್ಲಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸುವಾವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕಂದಕಕ್ಕೆ ಬಿದ್ದು ಹಸು ಸಾವು; ಪರಿಹಾರಕ್ಕೆ ಆಗ್ರಹ
ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಮಾತನಾಡಿ, “ಅಧಿಕಾರಿಗಳು ಹಸು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆ ಕುರಿತು ಸುದ್ದಿ ಮಾಡಿ ಸಂಬಂಧಪಟ್ಟವರ ಗಮನಕ್ಕೆ ತಂದ
ಈ ದಿನ.ಕಾಮ್ ಮಾಧ್ಯಮ ಸಂಸ್ಥೆಗೆ ಧನ್ಯವಾದಗಳು” ಎಂದರು.
ಇದೇ ಸಂದರ್ಭದಲ್ಲಿ ರೈತರಾದ ಪ್ರಭು ಕೊಡಲ್, ಶರಣಪ್ಪ, ಅಂಬ್ರೇಶ್ ತೆಲುಗುರ್, ಚಂದ್ರು ಅಲಿಗಿ, ಶಂಕರ್ ಹೆಳವರ್ ಸೇರಿದಂತೆ ಇತರರು ಇದ್ದರು.