ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಈಗ ಸೋತು ನಿರುದ್ಯೋಗಿ ಆಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಸೋಲಿಕ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಭಾನುವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
“ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿ ರೂ.ಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ನಡೆದುಕೊಂಡೆ. ಈಗ ಸೋತಿರುವೆ. ಬಿಜೆಪಿಯ ಕಾನೂನು ಪ್ರಕೋಷ್ಠ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಕಚೇರಿಗೆ ಆಗಮಿಸಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಮಾನ್ಯ ಸಭಾಧ್ಯಕ್ಷ ಖಾದರ್ ಅವರು ನೂತನ ಶಾಸಕರಿಗೆ ಯಾವ ದಿಕ್ಕು ತೋರಿಸುತ್ತಿದ್ದಾರೆ?
ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿ, “ನಾನು ಈಗಾಲೇ ಹೈಕಮಾಂಡ್ ಬಳಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನನಗೆ ಇತಿಮಿತಿ ಇದೆ. ಫೋರ್ ಸಿಕ್ಸ್ ಎಲ್ಲ ಇಲ್ಲೆ ಹೊಡೆಯುತ್ತೇನೆ ಅಂತ ಹೇಳಿದ್ದೇನೆ. ಈಗ ಬೋಲ್ಡ್ ಕೂಡ ಆಗಿದ್ದೇನೆ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
“ಡಬಲ್ ಸ್ಟ್ಯಾಂಡರ್ಡ್ ನನಗೆ ಇಲ್ಲ. ಎಲ್ಲ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಗೆ ಬಂದು ಎಂತೆಂತಹ ಸಂದರ್ಭದಲ್ಲೂ ಕೆಲಸ ಮಾಡಿದ್ದೇನೆ. ಈಗಲೂ ಅವಕಾಶ ಕೊಟ್ಟರೆ ಮಾಡುತ್ತೇನೆ” ಎಂದರು.
ನಿಮ್ಮ ಸ್ಟಾಂಡರ್ಡ್ ಹಾಗೆ ಉಳಿಸಿಕೊಂಡು ನಿಮ್ಮ ಮೂಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರೆ ಮಾಜಿ ಆಗುವ ಪ್ರಮೇಯ ಬರುತ್ತಿರಲಿಲ್ಲ,,, ಭಾರೀ ನಿಷ್ಠೆ ತೋರಿಸಿ ಮು ಮಂ ಕುರ್ಚಿ ಕನಸು ಕಂಡ ಪರಿಣಾಮ ಹೀಗಾಯಿತು,,,ಈ ತಂತ್ರ ಮಾಡಿಯೇ ನಿಮ್ಮನ್ನು ಬೆಂಗಳೂರಿಂದ ಜಾಗ ಖಾಲಿ ಮಾಡಿಸಿದರು,, ಇದರಲ್ಲಿ ಒಬ್ಬ ಯುವ ಸಂಸದನು ತನ್ನ ದಿಲ್ಲಿ ಗುರುಗಳ ಜೊತೆ ಸೇರಿ ಬಲೆ ಹಾಕಿ ಬೀಳಿಸಿದನೆಂದು ಮಾರುತಿ ಮಂದಿರದಲ್ಲಿ ಜನ ಮಾತಾಡುವರು