ಮೂರನೇ ಮಹಡಿ ಮೇಲಿನಿಂದ ಬಿದ್ದು ವೃದ್ಧ ವ್ಯಕ್ತಿ ಸಾವಿಗೀಡಾದ ಘಟನೆ ಧಾರವಾಡದ ಮಾಳಾಪುರದಲ್ಲಿ ನಡೆದಿದೆ.
65 ವರ್ಷದ ಅಮುದ್ದೀನ್ ಮಂಗಳಗಟ್ಟಿ ಎಂಬ ವೃದ್ಧ ವ್ಯಕ್ತಿಯೋರ್ವ ಮನೆಯ ಮೂರನೇ ಮಹಡಿಯ ಮೇಲೆ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ತಲೆ ಸುತ್ತು ಬಂದು ಕಟ್ಟಡದ ಮೇಲಿಂದ ಬಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ವೃದ್ಧ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.