ವಿದ್ಯಾರ್ಥಿಗಳಿಗೆ ನೀಡಲಾದ ಸಸ್ಯಾಹಾರಿ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಾಪುರ್‌ನಲ್ಲಿರುವ ರಾಮಾ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಸಸ್ಯಾಹಾರಿ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಘಟನೆಯ ವಿಡಿಯೋವನ್ನು ಪತ್ರಕರ್ತರೊಬ್ಬರು ಹಂಚಿಕೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ವೀಡಿಯೊದಲ್ಲಿ, ಸತ್ತ ಇಲಿಯನ್ನು ತರಕಾರಿ ಗ್ರೇವಿಯಿಂದ ಹೊರಹಾಕಲಾಗಿರುವುದು ಕಂಡುಬಂದಿದೆ. .
ಘಟನೆ ನಡೆದ ದಿನದ ಕುರಿತು ಮಾಹಿತಿಯಿಲ್ಲ. ಅದಾಗಿಯೂ ವಿದ್ಯಾರ್ಥಿಗಳು ಈ ಕುರಿತು ಯಾವುದೇ ದೂರು ದಾಖಲಿಸಿಲ್ಲ. ಸಂಬಂಧಿತ ಶಿಕ್ಷಣ ಸಂಸ್ಥೆಯು ಘಟನೆಯ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
ಬಾತುಕೋಳಿ ಮಾಂಸದ ಬದಲಿಗೆ ಇಲಿ ತಲೆ!
ಕೆಲ ದಿನಗಳ ಹಿಂದೆ ಚೀನಾದ ಜಿಯಾಂಗ್ಕ್ಸಿ ಎಂಬಲ್ಲಿರುವ ಇಂಡಸ್ಟ್ರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ಯಾಂಟೀನ್‌ನಲ್ಲಿ ನೀಡಲಾಗಿದ್ದ ಆಹಾರದಲ್ಲಿ, ಬಾತುಕೋಳಿ ಮಾಂಸದ ಬದಲಿಗೆ ಇಲಿಯ ತಲೆ ಪತ್ತೆಯಾಗಿತ್ತು.