ಬಳ್ಳಾರಿ | ದಲಿತರಿಗೆ ಸೇರಿದ ಜಾಗ, ಬಾವಿ ಅತಿಕ್ರಮಣ; ತೆರವಿಗೆ ಪಿ ಶೇಖರ್ ಆಗ್ರಹ

Date:

Advertisements

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾನಗರ ಪಾಲಿಕೆಯ ವಾರ್ಡ್ ನಂ.32ರ ಬಂಡಿಹಟ್ಟಿಯಲ್ಲಿ ಶತಮಾನದ ದಲಿತರ ಪುರಾತನ ಬಾವಿ ಮತ್ತು ಸುತ್ತಮುತ್ತಲಿನ ಸ್ಥಳವನ್ನು ಭೂಗಳ್ಳರು ಅಕ್ರಮವಾಗಿ ಅಕ್ರಮಿಸಿಕೊಂಡಿರುವುದನ್ನು ತೆರುವುಗೊಳಿಸಬೇಕು ಎಂದು ಒತ್ತಾಯಿಸಿದರು.

ಬಂಡಿಹಟ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ ಶೇಖರ್ ಮುಂದಾಳತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ನಡೆಸಿದ್ದು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಗ್ರಾಮೀಣ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.32, ಬಂಡಿಹಟ್ಟಿಯಲ್ಲಿ ಶತಮಾನದ ಪುರಾತನ ಬಾವಿಯಿದ್ದು, ಈ ಬಾವಿಯ ನೀರನ್ನು ದಲಿತರ ದೇವಸ್ಥಾನಗಳಿಗೆ ಮತ್ತು ದಲಿತರ ಕುಟುಂಬದ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು. ಈ ನಡುವೆ ಬಡಾವಣೆಯಲ್ಲಿ ಕೊಳಾಯಿ ಮತ್ತು ಬೋರ್‌ವೆಲ್‌ ನೀರು ಬಳಸುತ್ತಿದ್ದಾರೆ. ಹಾಗಾಗಿ ಈ ಬಾವಿಯ ನೀರು ಕಲುಷಿತಗೊಂಡು ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಬಾವಿಯ ನೀರು ಬಳಕೆಗೆ ಯೋಗ್ಯವಿಲ್ಲದಂತಾಗಿದೆ.

Advertisements

“ಭೂಗಳ್ಳರು ಬಾವಿ ಹಾಗೂ ಅದರ ಸುತ್ತಮುತ್ತಲಿನ ಸ್ಥಳವನ್ನು ಅಕ್ರಮವಾಗಿ ಕಬಳಿಸಿದ್ದು, ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿದ್ದಾರೆ. ಬಳಿಕ ಬಾವಿಯನ್ನು ಮುಚ್ಚಿ ಸುತ್ತಲಿರುವ ಜಾಗವನ್ನು ಅಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.

“ಬಂಡಿಹಟ್ಟಿ ದಲಿತರು ಭೂ ಆಕ್ರಮಣಾಕಾರಿಗಳನ್ನು ವಿಚಾರಿಸಿದಾಗ ಸುಳ್ಳು ದಾಖಲೆಗಳನ್ನು ತೋರಿಸಿದ್ದಾರೆ. ಬಾವಿ ಹಾಗೂ ಜಾಗದ ನಕಲಿ ದಾಖಲೆಗಳನ್ನು ಇಲಾಖೆಯ ಅಧಿಕಾರಿಗಳು ಸೃಷ್ಟಿಸಿರುವ ಅನುಮಾನಗಳು ದಟ್ಟವಾಗಿವೆ” ಎಂದು ಅನುಮಾನ ವ್ಯಕ್ತಪಡಿಸಿದರು.

“ಸ್ವಾತಂತ್ರ್ಯ ಬಂದು 10 ದಶಕಗಳು ಕಂಡಿದ್ದರೂ ಇಲ್ಲಿನ ನೂರಾರು ದಲಿತ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ನೀಡದೆ ದಲಿತ ಕುಟುಂಬಗಳ ಹಕ್ಕುಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡದೆ, ಭೂಗಳ್ಳರು ಉದ್ಯಾನವನ, ದಲಿತರ ಸ್ಮಶಾನ ಮತ್ತು ಶಾಲೆಯ ಆವರಣಗಳು, ಗುಡಿ ಜಾಗಗಳು ಹಾಗೂ ದಲಿತರಿಗೆ ಮೀಸಲಿದ್ದ ಬಾವಿಯನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? 25 ಸಾವಿರ ಶಿಕ್ಷಕರ ವಜಾಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆಘಾತ

‘ಶೋಷಿತರಿಗೆ ಮೀಸಲಿದ್ದ ಬಾವಿ ಹಾಗೂ ಜಾಗವನ್ನು ಅತಿಕ್ರಮಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮೀತಿ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.

ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯ ಪದಾಧಿಕಾರಿ ಜಿಲ್ಲಾ ಉಪಾಧ್ಯಕ್ಷೆ ರೋಹಿಣಿ, ಈರಮ್ಮ, 32ನೇವಾರ್ಡ್ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ರಮೇಶ್, ಕೃಷ್ಣ ವಾಲ್ಮೀಕಿ, ಲಕ್ಷ್ಮೀದೇವಿ, ರೈತ ಘಟಕ ಅಧ್ಯಕ್ಷ ಬಸವರಾಜ್, ಹೆಚ್. ನೀಲಪ್ಪ, ಗಂಗಾಧರ, ತಿಮ್ಮಣ್ಣ, ರುದ್ರಪ್ಪ, ಗಿಡ್ಡ ನಾಗರಾಜ್, ವಿರುಪಾಕ್ಷಿ, ರೆಡ್ಡಿ, ಗೋವಿಂದ ಹಾಗೂ ಇತರರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X