ಮಳೆಯಿಂದಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಂದಿದ್ದ ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರು, ವರ್ತಕರು ಪರದಾಟ ನಡೆಸಿದ್ದಾರೆ.
ರಾಜ್ಯದ ಹಲವು ಕಡೆಗಳಲ್ಲಿ ಮಳೆ ಆಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿಯೂ ವ್ಯಾಪಕ ಮಳೆಯಾಗುಟ್ಟಿದ್ದು, ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಬ್ಯಾಡಗಿ ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರ ಪರದಾಡುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಏಪ್ರಿಲ್ ಮೊದಲ ವಾರ ಉದ್ಯೋಗ ಖಾತ್ರಿ ಕೆಲಸ ಆರಂಭ
ಬ್ಯಾಡಗಿ ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಎರಡು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಬಂದಿವೆ. ಆದರೆ ಮಳೆಯಿಂದಾಗಿ ಒಣಮೆಣಸಿನಕಾಯಿ ನೆನಯುವ ಆತಂಕ ಎದುರಾಗದ್ದು, ರೈತರು, ವರ್ತಕರು ಮೆಣಸಿನಕಾಯಿ ಚೀಲಗಳಿಗೆ ಟಾರ್ಪಲ್ಗಳನ್ನು ಹೊದಿಸಿದ್ದಾರೆ.
