ರಾಜ್ಯ ಸರ್ಕಾರ ಟೋಲ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ದರ ಏರಿಕೆ ಖಂಡಿಸಿ ಧಾರವಾಡ ಜಿಲ್ಲಾ ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಗೆ ಬರುವ ನಲವಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ’ದ ಬಳಿ ಏ.11ರಂದು ಧಾರವಾಡ ಜಿಲ್ಲೆಯ ವಿವಿಧ ಸಂಘಟನೆಗಳು ಮತ್ತು ಆಮ್ ಆದ್ಮಿ ಪಕ್ಷದ ಜಂಟೀ ಸಹಯೋಗದಲ್ಲಿ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ತೀರ್ಮಾನಿಸಿದರು. ಸರ್ಕಾರವು ಜನರಿಗೆ ಸರಿಯಾಗಿ ಮೂಲಭೂತ ಸೌಕರ್ಯ ಒದಗಿಸದೆ. ಜನರನ್ನು ಸುಲಿಗೆ ಮಾಡುತ್ತಿರುವ ಹಾಗೂ ಎಪ್ರಿಲ್ ಒಂದರಿಂದ ಟೋಲ್ ದರ ಹೆಚ್ಚಳ ಮಾಡಿದ್ದು ಸಾಮಾನ್ಯವಾಗಿ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರಣ ಪ್ರತಿಭಟಿಸುವುದು ತುರ್ತಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಮೂಲಭೂತ ವ್ಯವಸ್ಥೆಗಳ ಕೊರತೆ ಎದ್ದುಕಾಣುತ್ತಿದೆ.
ಹಲವು ಮೂಲಭೂತ ಸೌಕರ್ಯಗಳ ಕಲ್ಪಿಸಿದೆ ಇರುವುದನ್ನು, ಟೋಲ್ ದರ ಏರಿಕೆಯನ್ನು ಖಂಡಿಸಿ ಧಾರವಾಡ ಜಿಲ್ಲೆಯ ಕನ್ನಡಪರ ಸಂಘಟನೆ, ದಲಿತ ಸಂಘಟನೆ, ರೈತ ಸಂಘಟನೆ, ಧಾರವಾಡ ಜಿಲ್ಲಾ ವಾಹನ ಮಾಲಿಕರ, ಚಾಲಕರ ಸಂಘ, ಆಟೋ ಚಾಲಕರ ಸಂಘ, ಧಾರವಾಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಸಹಯೋಗದೊಂದಿಗೆ ಹಾಗೂ ಖಾಸಗಿ ವಾಹನಗಳ ಸವಾರರ ಸಹಭಾಗಿತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ನಿರ್ಯಣ ತೆಗೆದುಕೊಂಡರು. ಏ.11ರಂದು ನಲವಡಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಬಳಿ ರಸ್ತೆ ತಡೆದು ‘ನಾವ್ಯಾಕೆ ಟೋಲ್ ಕಟ್ಟಬೇಕು’ ಎಂಬ ಶಿರ್ಷಿಕೆಯ ಹೋರಾಟ ಆರಂಭಿಸಲಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನಾಯಕರು ಭಾಗವಸಲಿದ್ದಾರೆ.
ಈ ಸುದ್ಧಿ ಓದಿರಿ! ಧಾರವಾಡ | ಬೇಂದ್ರೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಸಂಜೀವ ದುಮಕನಾಳ, ಮಂಜುನಾಥ ಲೂತಿಮಠ. ಹುಸೇನಸಾಬ ತಳೆವಾಡ, ರೈತ ಹೋರಾಟಗಾರ ಸಿದ್ದಣ್ಣ ತೇಜಿ, ಹನುಮಂತ ಪವಾಡಿ, ಈರಣ್ಣ ಎಮ್ಮಿ, ಚಿದಾನಂದ ಸವದತ್ತಿ, ಪ್ರಕಾಶ ನಾಯ್ಕ, ಸಂಜೀವ ಬೆಳಗೇರಿ, ಕುಮಾರ ಲಕ್ಕಣ್ಣವರ, ದತ್ತು ಪವಾರ, ಉಷಾ ಚಲವಾದಿ, ಇನ್ನಿತರರು ಇದ್ದರು.