ಕಾನೂನಿನ ಸರಿಯಾದ ತಿಳಿವಳಿಕೆಯಿಂದ ನಾಗರಿಕ ಬದುಕು ಸುಗಮ ಹಾಗೂ ಸುಸ್ಥಿರವಾಗಿ ಸಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಇಂದಿನ ಯುವ ಸಮುದಾಯದ ಮುಂದೆ ಹಲವು ಆಕರ್ಷಣೆಗಳಿವೆ. ಮೊಬೈಲ್, ಅಂತರ್ಜಾಲ ಮುಂತಾದವುಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಸಂಯಮ, ಸಹನೆ, ಸಾಮಾಜಿಕ ಕಾಳಜಿ ಕಡಿಮೆಯಾಗುತ್ತಿದೆ. ಏಕಾಂಗಿತನ ಹೆಚ್ಚಾಗುತ್ತಿದೆ. ಮದ್ಯಪಾನ, ಗಾಂಜಾ ಸೇವನೆಯಿಂದ ಬದುಕನ್ನು ದುರಂತಗೊಳಿಸಿಕೊಳ್ಳುತ್ತಿದ್ದಾರೆ. ಸರಿಯಾದ ತಿಳಿವಳಿಕೆ, ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆಲ್ಲಾ ಕಾನೂನಿನ ಬಗ್ಗೆ ಅರಿವು ಅತ್ಯಗತ್ಯ” ಎಂದರು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಶ್ರೀ ಗೋಪಿನಾಥ್ ಎಸ್ ಎಂ, ಡಾ. ಎ ಟಿ ಪದ್ಮೇಗೌಡ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ಮಾಲತೇಶ್, ದಿವ್ಯ ಪ್ರವೀಣ್, ಎನ್ ಎಸ್ ಎಸ್ ಅಧಿಕಾರಿ ಗಿರಿಧರ್, ಡಾ. ಹಾ ಮ ನಾಗಾರ್ಜುನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ 150 ಸ್ವಯಂ ಸೇವಕರು ಮತ್ತು ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಿವಮೊಗ್ಗ | ಬಿಜೆಪಿಯ ಮುಂದಿನ ಟಾರ್ಗೆಟ್ ಸಿಟಿ ರವಿ: ಶಾಸಕ ಬೇಳೂರು ಗೋಪಾಲ್ ಕೃಷ್ಣ