ಪದವಿ ಜತೆಗೆ ಕೌಶಲ ಇದ್ದರೆ ಭವಿಷ್ಯ ಉಜ್ವಲವಾಗಲಿದೆ ಎಂದು ಹೈದರಾಬಾದ್‍ನ ಪ್ರೇರಕ ಭಾಷಣಕಾರ ವೆಂಕಟ ವವಿಲಾಲಾ ಹೇಳಿದರು.
ಬೀದರ್ ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹೈದರಾಬಾದ್‍ನ ಧ್ರುವ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ವೃತ್ತಿ ಮಾರ್ಗದರ್ಶನ ಹಾಗೂ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಕೌಶಲಕ್ಕೆ ಈಗ ಎಲ್ಲೆಡೆ ಬಹು ಬೇಡಿಕೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪದವಿಗಷ್ಟೇ ಸೀಮಿತರಾಗಬಾರದು. ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ನೆರವಾಗುವ ಎಂಬಿಎ, ಎಂಎಸ್ಸಿ ಹಾಗೂ ಎಂಕಾಂ ಸೇರಿದಂತೆ ವಿವಿಧ ಕೋರ್ಸ್‍ಗಳ ಅಧ್ಯಯನಕ್ಕೆ ಆಸಕ್ತಿ ತೋರಬೇಕು. ಯುಪಿಎಸ್‍ಸಿ, ಕೆಪಿಎಸ್‍ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬೇಕು. ಹೆಚ್ಚು ಅಭಿರುಚಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಲ್ಲಿ ಯಶಸ್ಸು ಗಳಿಸಬಹುದುʼ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ.ಮಲ್ಲಿಕಾರ್ಜುನ ಹಂಗರಗಿ, ಹೈದರಾಬಾದ್‍ನ ಎಸ್ಎನ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಶಂಕರ ಜಾಧವ್, ಉಪ ಪ್ರಾಚಾರ್ಯ ಸೋಮನಾಥ ಬಿರಾದಾರ, ಐಕ್ಯೂಎಸಿ ಸಂಯೋಜಕ ಡಾ. ರಾಜಕುಮಾರ ಪರದೇಶಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಸಿಲಿನ ತಾಪ : ಮನರೇಗಾ ಕಾರ್ಮಿಕರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ
ಕಾಲೇಜಿನ ಐಐಸಿ ಘಟಕದ ಮುಖ್ಯಸ್ಥ ಡಾ. ವಿನೋದ ಕಾಳೇಕರ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಿ ಕ್ರಿಸ್ಟಿನಾ ನಿರೂಪಿಸಿದರು. ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪವನಕುಮಾರ ವಂದಿಸಿದರು.