ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾದ ಮಧ್ಯ ಉಕ್ರೇನ್‌ನ ಕ್ರಿವಿ ರಿಹ್ ಮೇಲೆ ರಷ್ಯಾ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಒಂಬತ್ತು ಮಂದಿ ಮಕ್ಕಳಾಗಿದ್ದಾರೆ ಎಂದು ಕ್ರಿವಿ ರಿಹ್‌ನಲ್ಲಿ ಬೆಳೆದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. 10 ಅಂತಸ್ತಿನ ಕಟ್ಟಡ ಬಹುತೇಕ ನಾಶವಾಗಿದ್ದು, ಮೃತದೇಹ ರಸ್ತೆಯಲ್ಲಿರುವುದ ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನು ಓದಿದ್ದೀರಾ? ರಷ್ಯಾ-ಉಕ್ರೇನ್ ಯುದ್ಧಕ್ಕೆ 3 ವರ್ಷ: ಉಕ್ರೇನ್ ಮೇಲೆ ರಷ್ಯಾ 267 ಡ್ರೋನ್‌ಗಳಿಂದ ದಾಳಿ
ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ದಾಳಿಯಿಂದ 85 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಯಾವುದೇ ಪುರಾವೆಗಳನ್ನು ನೀಡಿಲ್ಲ. “ತನ್ನ ಸಿನಿಕತನದ ಅಪರಾಧವನ್ನು ಮುಚ್ಚಿಡಲು ರಷ್ಯಾ ಸುಳ್ಳು ಮಾಹಿತಿಯನ್ನು ಹರಡುತ್ತಿದೆ” ಎಂದು ಉಕ್ರೇನ್‌ನ ಮಿಲಿಟರಿ ಹೇಳಿದೆ.
2022ರಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ಒತ್ತಾಯಿಸುತ್ತಿರುವ ನಡುವೆ ಮತ್ತಷ್ಟು ದಾಳಿ ಹೆಚ್ಚಾಗುತ್ತಿದೆ.
ಶುಕ್ರವಾರದ ದಾಳಿಯಲ್ಲಿ ಕನಿಷ್ಠ ಐದು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. “ರಷ್ಯಾ ಕದನ ವಿರಾಮವನ್ನು ಬಯಸಲ್ಲ” ಎಂದಿದ್ದಾರೆ.
