ಧರ್ಮದ ದೃಷ್ಟಿಯಲ್ಲಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಕೆಟ್ಟ ಅಭಿಪ್ರಾಯಗಳಿರಬಹುದು. ಆದರೆ, ಭಾರತದ ಸಂವಿಧಾನ ಮತ್ತು ಬಸವಾದಿ ಶರಣರ ಮೌಲ್ಯಗಳಲ್ಲಿ ಲೈಂಗಿಕತೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ಒಳ್ಳೆಯ ಗೌರವವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಷತಾ ಕೆ.ಸಿ ತಿಳಿಸಿದರು.
ಹಾವೇರಿ ಜಿಲ್ಲೆಯ ಅಗಡಿ ಅಕ್ಕಿಮಠದಲ್ಲಿ ಗುರುಲಿಂಗ ಸ್ವಾಮಿಗಳ ಜೊತೆಗೆ ಧರ್ಮ ಮತ್ತು ಲೈಂಗಿಕತೆ ಕುರಿತಂತೆ ಚರ್ಚೆ ನಡೆಸಿ ಮಾತನಾಡಿದರು. “ಧರ್ಮವು ಮನುಷ್ಯರನ್ನು ಬೇರ್ಪಡಿಸಿದರೆ, ವಚನಗಳು ಹಾಗೂ ಸಂವಿಧಾನವು ಸರ್ವರೂ ಒಂದೇ ಎಂಬ ಸಂದೇಶವನ್ನು ಸಾರಿ ಅದರಂತೆ ಇವರೂ ನಮ್ಮವರೆಂದು ಅಪ್ಪಿಕೊಳ್ಳುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಲಿಂಗತ್ವ ಅಲ್ಪಸಂಖ್ಯಾತರಿಗೆ ನಮ್ಮ ಕ್ಲಿನಿಕ್ ಸ್ಥಾಪನೆ
ಜುಲೈ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಧರ್ಮ ಮತ್ತು ಲೈಂಗಿಕತೆ ಕಾರ್ಯಕ್ರಮಕ್ಕೆ ಶ್ರೀಗಳ ಆಹ್ವಾನ ಕುರಿತಂತೆ ಚರ್ಚೆ ಮಾಡಿದ ಸಂದರ್ಭದಲ್ಲಿ ಸಂಜೀವಿನಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.