ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ಇಂದು ದೇಶ ಕಂಡ ಶ್ರೇಷ್ಠ ರಾಜಕೀಯ ನಾಯಕ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಆಚರಿಸಲಾಯಿತು.
ಅವರು ಅರ್ಧ ಶತಮಾನಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾದ ರಾಜಕಾರಣಿ ಎಂಬ ವಿಶ್ವ ದಾಖಲೆ ಇದೆ ಎಂದು ನಾದ ಕೆಡಿ ಗ್ರಾಪಂ ಸದಸ್ಯ ಪೈಗಂಬರ್ ದೇಸಾಯಿ ಹೇಳಿದರು.
ಮಾಜಿ ಸೈನಿಕ ಸುರೇಶ ಬಡಿಗೇರ, “ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯರಾದವರು. ಅವರು ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕ ಖಾತೆಯ ಶಿಲ್ಪಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರ ಜನ್ಮ ದಿನವನ್ನು ‘ಸಮಾನತೆಯ ದಿನ’ಎಂದು ಆಚರಿಸಲಾಗುವುದು” ಎಂದರು.
ರಕ್ಷಣಾ ವೇದಿಕೆಯ ಅಧ್ಯಕ್ಷ ರಾಜಕುಮಾರ ಪಾಟೀಲ ಮಾತನಾಡಿ, “ಜಗಜೀವನ ರಾಮ್ ಅವರು ಮೇಲು ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸುತ್ತಾ, ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ʼಏತ ನೀರಾವರಿ ಪೂರ್ಣಗೊಳಿಸಿ ರೈತರ ಹಿತ ಕಾಪಾಡಿʼ
ಕಾರ್ಯಕ್ರಮದಲ್ಲಿ ಉಮರೇಲಿ ಜಮಾದಾರ, ಮಲ್ಲು ಮಾದರ, ಬಸವರಾಜ ಕಟ್ಟಿಮನಿ, ಸದಾಶಿವ ಮಾಶ್ಯಾಳಕರ., ಶ್ರೀಶೈಲ ಕಟ್ಪಿಮನಿ, ಕನ್ನಪ್ಪ ಕಟ್ಟಿಮನಿ, ಗುಂಡುರಾವ್ ಮಡ್ನಳ್ಳಿ, ಮೌನೇಶ ಬಡಿಗೇರ, ಸಂಜೀವ ಮಾಶ್ಯಾಳಕರ, ಲಕ್ಕಪ್ಪ ಕಟ್ಟಿಮನಿ, ಶಂಕರ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.