ಚುನಾವಣೆ ವೇಳೆ ಪಕ್ಷದ ವಿರುದ್ಧ ಕೆಲಸ ಮಾಡಿದ ಪಕ್ಷ ವಿರೋಧಿಗಳನ್ನು ಬಿಜೆಪಿಯಿಂದ ಹೊರಹಾಕಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಬಿಜೆಪಿ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಘಟನೆ ನಡೆದಿದೆ. ಕೇಂದ್ರದಲ್ಲಿ ಬಿಜೆಪಿ ಒಂಬತ್ತು ವರ್ಷ ಆಡಳಿತ ಪೂರೈಸಿದ್ದ ಭಾಗವಾಗಿ ಸಂಭ್ರಮಾಚರಣೆಗಾಗಿ ಬಿಜೆಪಿ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಬೊಮ್ಮಾಯಿ, ಬಸನಗೌಡ ಯತ್ನಾಳ್ ಭಾಗವಹಿಸಿದ್ದರು. ಅವರಿಬ್ಬರ ಎದುರೇ ಗಲಾಟೆ ನಡೆದೆ. ಆದರೂ, ಈ ಇಬ್ಬರೂ ನಾಯಕರು ಕಾರ್ಯಕರ್ತರನ್ನು ಸಮಾಧಾನಿಸುವ ಪ್ರಯತ್ನ ಮಾಡದೇ, ಸುಮ್ಮನೆ ಕುಳಿತಿದ್ದರು ಎಂದು ತಿಳಿದುಬಂದಿದೆ.
“ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಪಕ್ಷದಿಂದ ಹೊರಹಾಕಬೇಕು. ಇಲ್ಲದಿದ್ದರೇ ನಾವೇ ಪಕ್ಷ ತೊರೆಯುತ್ತೇವೆ” ಎಂದು ಬಿಜೆಪಿ ಮುಖಂಡ ರಾಜು ರೇವಣಕರ ಹೇಳಿದ್ದಾರೆ. ಅವರ ಹೇಳಿಕೆಗೆ ಹಲವಾರು ಕಾರ್ಯಕರ್ತರು ಧ್ವನಿಗೂಡಿಸಿದ್ದಾರೆ.
ಕಾರ್ಯಕರ್ತರೆಲ್ಲರೂ ವೇದಿಕೆ ಮುಂಭಾಗದಲ್ಲಿ ಗುಂಪು ಗೂಡಿ, ಪಕ್ಷ ವಿರೋಧಿಗಳು ಪಕ್ಷದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದ್ದಾರೆ.