ತುಮಕೂರು | ಡಾ. ಓ ನಾಗರಾಜು ವಿರಚಿತ ʼಹಿಂದೂಪುರʼ ಕಾದಂಬರಿ ಜನಾರ್ಪಣೆ

Date:

Advertisements

ಪುಸ್ತಕ ಪ್ರಕಾಶನ ಉದ್ಯಮವಾಗಿ ಕೋಟ್ಯಾಂತರ ರೂ ವ್ಯವಹಾರ ನಡೆಸುತಿದ್ದು,ಸಾಹಿತಿಗಳ ಗುಂಪು ಗಾರಿಕೆ,ಪುಸ್ತಕ ಪ್ರಕಾಶನದಲ್ಲಿಯೂ ಮುಂದುವರೆದಿದ್ದು, ಇದಕ್ಕೆ ಇತ್ತೀಚಗೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳವೇ ಸಾಕ್ಷಿ ಎಂದು ಕಥೆಗಾರ, ಪತ್ರಕರ್ತ ರಘುನಾಥ ಚ.ಹ. ಅಭಿಪ್ರಾಯಪಟ್ಟರು.

ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಶಾಖೆ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ದವನ ಭೂಮಿಕೆ ಸಾಂಸ್ಕೃತಿಕ ಟ್ರಸ್ಟ್, ಜಿಲ್ಲಾ ಲೇಖಕಿಯರ ಸಂಘ, ಪ್ರಕೃತಿ ಜನಸೇವ ಟ್ರಸ್ಟ್ ಇವರ ಸಹಯೋಗದಲ್ಲಿ ಡಾ.ಓ.ನಾಗರಾಜು ಅವರ “ಹಿಂದೂಪುರ” ಕಾದಂಬರಿಯ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,  ಪ್ರಕಾಶನ ಸಂಸ್ಥೆಯೊಂದು ಒಂದು ವರ್ಷದಲ್ಲಿ ಸುಮಾರು 1.04 ಕೋಟಿ ರೂಗಳ ವಹಿವಾಟು ನಡೆಸಿದೆ.ಆದರೆ ಅವರು ಪ್ರಕಟಿಸಿದ ಒಂದೇ ಒಂದು ಕೃತಿ ಕೂಡ ಸಾರ್ವಜನಿಕವಾಗಿ ಚರ್ಚೆಯಾಗಿಲ್ಲ. ಆದರೆ ದಲಿತ, ಬಂಡಾಯ ಬರಹಗಾರರು ಬರೆದ ಅನೇಕ ಕೃತಿಗಳು ಚರ್ಚೆಯಾಗಿವೆ. ಚರ್ಚೆಯ ವಸ್ತು ಲೇಖಕನೇ ಆಗಿರುವುದು ವಿಪರ್ಯಾಸ ಎಂದರು.

1001263811

ಸಾಹಿತ್ಯವೂ ಒಂದು ಪ್ರದರ್ಶನ ಕಲೆಯಾಗಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.ಪುಸಕ್ತವನ್ನು ಪ್ರಸಾದ ಎನ್ನುಕೊಳ್ಳುವ ಗುಂಪು ಒಂದಾದರೆ, ಪುಸ್ತಕವನ್ನು ಪದಾರ್ಥ ಎನ್ನುವ ಗುಂಪು ಮತ್ತೊಂದು ಇದೆ. ಈ ಎರಡು ಗುಂಪನ್ನು ಮೀರಿದ ಕೃತಿ ಹಿಂದೂಪುರ. ಇದು ಸ್ತ್ರೀ ಕಥನವಾಗಿದೆ.ಬಹುತ್ವದ ನೆಲೆಗಟ್ಟಿನಲ್ಲಿ ರಚಿತವಾದ ನೈತಿಕತೆ ಮತ್ತು ಅನೈತಿಕತೆಯ ನಡುವಿನ ಮುಖಾಮುಖಿಯಾಗಿದೆ. ಈ ಕೃತಿಯಲ್ಲಿ ಹಲವು ಸಂಗತಿಗಳು ದಲಿತರು, ಹಿಂದುಳಿದವರು ನೈತಿಕತೆಯ ವಾರಸುದಾರರು ಎಂಬುದನ್ನು ಸಾರಿ ಹೇಳಿವೆ.ಬೌದ್ದಿಕ ತಾತ್ವಿಕತೆ ಮತ್ತು ಶಿಕ್ಷಣದ ಬೆಳಕು ಎರಡನ್ನು ಕೃತಿಯಲ್ಲಿ ತರಲಾಗಿದೆ. ಈ ಕೃತಿಗೆ ನ್ಯಾಯವಾದ ವಿಮರ್ಶೆ ಸಿಗಬೇಕು. ಹಾಗೆಯೇ ನಮ್ಮ ನಡುವೆ ಚರ್ಚೆಯ ವಸ್ತುವಾಗಿಸುವ ಕೆಲಸ ಆಗಬೇಕು ಎಂದು ರಘುನಾಥ ಚ.ಹ. ಸಲಹೆ ನೀಡಿದರು.

Advertisements

ಕೃತಿಯ ಕುರಿತು ಮಾತನಾಡಿದ ಡಾ.ಲಕ್ಷೀನಾರಾಯಣಸ್ವಾಮಿ,ಕನ್ನಡ ಸಾಹಿತ್ಯದಲ್ಲಿರುವ ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಗಳಲ್ಲಿನ ದಲಿತತ್ವದ ಪ್ರತಿನಿಧಿಕರಣ ಕೃತಿ ಇದಾಗಿದೆ.ಗಾಂಧಿಯ ಗ್ರಾಮ ಭಾರತದ ಎಲ್ಲಾ ಪಾತ್ರಗಳು ಡಾ.ಓ.ನಾಗರಾಜು ಅವರ ಹಿಂದೂಪುರ ಕೃತಿಯಲ್ಲಿ ಸಾಕಾರಗೊಂಡಿದೆ.ಈ ಕೃತಿಗೆ ಚಾರಿತ್ರಿಕ ಮಹತ್ವ ಮತ್ತು ಸಮಕಾಲಿನ ಸ್ಪಂದನೆ ಎರಡು ದೊರೆಯಬೇಕಿದೆ.ಡಾ.ಓ.ನಾಗರಾಜು ಅವರ ಕುರಂಗರಾಯ ಕೃತಿ ಒಳಮೀಸಲಾತಿಯ ಮೊದಲ ಪ್ರಶ್ನೆಯನ್ನು ಎತ್ತಿದ್ದು,ಅದು ಇಂದು ಸಕಾರಗೊಂಡಿದೆ.ಇದರ ನಂತರವೂ ಎಡ-ಬಲ ಸಮುದಾಯಗಳು ಒಗ್ಗೂಡಬೇಕು ಎಂಬ ಆಶಯವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.ಮೂರು ತಲೆಮಾರುಗಳ ಕಥನದಲ್ಲಿ ಹಲವಾರು ಸಾಮಾಜಿಕ ಮಾರ್ಪಡುಗಳನ್ನು ಕಾಣಬಹುದಾಗಿದೆ ಎಂದರು.

1001263840

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ,ಕನ್ನಡ ಸಾಹಿತ್ಯದಲ್ಲಿ ಬಂಡಾಯ, ದಲಿತ, ಪ್ರಗತಿಪರ ಸಾಹಿತಿಗಳ ಕೃತಿಗಳನ್ನು ವಿಮರ್ಶಕರು ನೋಡುವ ದೃಷ್ಟಿಕೋನ ಬದಲಾಗಿದೆ.ಹಾಗಾಗಿಯೇ ಅನೇಕ ಕೃತಿಗಳು ಜನರ ನಡುವೆ ಚರ್ಚೆಗೆ ಬಾರದಂತಾಗಿವೆ.ಇದರಿಂದ ಲೇಖಕರರು ಅಧೀರರಾಗುವ ಅವಶ್ಯಕತೆಯಲ್ಲ. ಸಿದ್ದಮಾದರಿಯ ಸಾಹಿತ್ಯ ಮತ್ತು ವಿಮರ್ಶೆಯ ನೋಟವನ್ನು ಹತ್ತಿಕ್ಕುವ ಹಿನ್ನಲೆಯಲ್ಲಿ ಬರವಣಿಗೆ ಮುಂದುವರೆಯಬೇಕು. ಕೆಲವೊಂದು ಸಂದರ್ಭದಲ್ಲಿ ವಿಮರ್ಶೆ ಕೂಡ ಜಾತಿ, ವರ್ಗ, ಪಂಥ, ಜೀವನ ಕ್ರಮ, ಸಾಹಿತ್ಯ ಕೃತಿಯ ಕುರಿತ ವಿಮರ್ಶಕನ ಪರಿಕಲ್ಪನೆ ಇವೆಲ್ಲವನ್ನು ಅವಲಂಬಿಸಿರುತ್ತದೆ. ಒಂದು ರೀತಿಯಲ್ಲಿ ಪೂರ್ವಗ್ರಹದ ಪಾಪದ ಕೂಸುಗಳಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ನಾಗಣ್ಣ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಕುಂದೂರು ತಿಮ್ಮಯ್ಯ, ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ,ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು,ವಿರೂಪಾಕ್ಷ ಡ್ಯಾಗೇರಹಳ್ಳಿ, ಬಸವರಾಜಪ್ಪ ಅಪ್ಪಿನಕಟ್ಟೆ,ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ, ಹಿಂದೂಪುರ ಕಾದಂಬರಿಯ ಲೇಖಕರಾದ ಡಾ.ಓ.ನಾಗರಾಜು,ಉಪನ್ಯಾಸಕರಾದ ರೇಣುಕಪ್ರಸಾದ್,ಮಂಜುಳ ಓ.ನಾಗರಾಜು ಮತ್ತಿತರರು ವೇದಿಕೆಯಲ್ಲಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X