ತುಮಕೂರು | ಸಮೀಕ್ಷೆಯಲ್ಲಿ ಮೂಲಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಿ : ಎಚ್. ಆಂಜನೇಯ

Date:

Advertisements

ಒಳಮೀಸಲಾತಿ ಹೋರಾಟಕ್ಕೆ 2024ರ ಆಗಸ್ಟ್ 01ರ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ತೀರ್ಪು ದೊಡ್ಡ ಶಕ್ತಿ ನೀಡಿದೆ.ತೀರ್ಪಿನ ಫಲವಾಗಿಯೇ ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ರಾಜಕಾರಣಿಗಳು ಮಾತನಾಡುವಂತಾಗಿದೆ.ಒಳಮೀಸಲಾತಿ ಜಾರಿ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು

ತುಮಕೂರು ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ, ತುಮಕೂರು ಆಯೋಜಿಸಿದ್ದ ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ಜಯಂತಿ,ಬಾಬು ಜಗಜೀವನ್‌ರಾಂ ಪ್ರಶಸ್ತಿ ಪುರಸ್ಕತರಿಗೆ ಅಭಿನಂದನಾ ಸಮಾರಂಭ ಮತ್ತು ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಕ್ರೋಡೀಕರಣ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳಮೀಸಲಾತಿ ಕಲ್ಪಿಸಬೇಕೆಂದು 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳಿದೆ. ಹೀಗಾಗಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.

1001267937

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಮತ್ತು ಈ ಶೋಷಿತ ಸಮುದಾಯ, ಹಿಂದುಳಿದವರ ಪರವಾದಂತಹ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಒಳಮೀಸಲಾತಿಯನ್ನು ಜಾರಿಗೆ ತರುತ್ತೇವೆ.ಆಂಧ್ರ ಪ್ರದೇಶದಲ್ಲಿ ಮಾದಿಗ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ದೊರೆತಿದೆ. ಇಲ್ಲಿಯೂ ಅದೇ ರೀತಿಯಲ್ಲಿ ಮೀಸಲಾತಿ ಸಿಗಬೇಕಾಗಿತ್ತು. ಆದರೆ ಕೆಲವರು ಒಳಮೀಸಲಾತಿ ಆಗಲಿ ಎಂದು ಹೇಳುತ್ತಾರೆಯೇ ಹೊರತು,ಅದನ್ನು ಜಾರಿಗೆ ಒತ್ತಡ ಹಾಕುವುದಿಲ್ಲ.ಇದರ ಪರಿಣಾಮ ಇಲ್ಲಿಯವರೆಗೆ ಎಳೆದುಕೊಂಡು ಬಂದಿದೆ ಎಂದು ಹೆಚ್.ಅಂಜನೇಯ ನುಡಿದರು.

Advertisements

ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಎಲ್ಲರೂ ಹಿಂಜರಿದರು.ಅದು ಜಾರಿಯಾದ ಮೇಲೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಮೀಸಲಾತಿ ಕಲ್ಪಿಸಲು ತೊಡಕಾಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದರು. ಎಂಪೆರಿಕಲ್ ಡೇಟಾ ಸಂಗ್ರಹಕ್ಕೆ ಹೇಳಿದ್ದಾರೆ. ನಿಖರ ಮಾಹಿತಿ ಸಿಕ್ಕಿದರೆ ಅದರಿಂದ ಒಳ್ಳೆಯದಾಗಲಿದೆ.ಜಾತಿಯ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಅಂತಾ ಇದೆ. ಮೈಸೂರು ಮತ್ತು ಬೆಂಗಳೂರು ವಿಭಾಗದ ಸುಮಾರು 16 ಜಿಲ್ಲೆಗಳಲ್ಲಿ ಈ ಗೊಂದಲ ಮುಂದುವರೆದಿದೆ. ಹೀಗಾಗಿ ಮಾದಿಗರು ಆದಿ ಕರ್ನಾಟಕ ಬರೆಸಿದ ನಂತರ ಮೂಲಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು ಎಂದು ಕರೆ ನೀಡಿದರು.

ಜಾತಿಗಣತಿ ಸರ್ವೇಗೆ ಅಧಿಕಾರಿಗಳು ಆಗಮಿಸಿದ ವೇಳೆ ಜಾತಿ ಕಲಂನಲ್ಲಿ ಆದಿ ಕರ್ನಾಟಕ ಬರೆಸಿದ ಮೇಲೆ ಮಾದಿಗರೋ, ಹೊಲೆಯರೋ, ಛಲವಾದಿಗಳೋ ಎಂಬುದನ್ನು ಬರೆಸಬೇಕು. ಆದಿ ದ್ರಾವಿಡ ಎಂದು ಬರೆಸಿದ ಮೇಲೆ ಹೊಲೆಯರೋ, ಛಲವಾದಿಗಳೋ, ಮಾದಿಗರೋ ಎಂಬುದನ್ನು ಸ್ಪಷ್ಟವಾಗಿ ಬರೆಸಬೇಕು. ಆಗ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಎಲ್ಲರೂ ಆಧಾರ್ ಕಾರ್ಡ್   ಲಿಂಕ್ ಮಾಡಿಸಬೇಕು. ಹಾಗಾಗಿ ಮಾದಿಗ ಎಂದು ನೇರವಾಗಿ ಬರೆಸುವವರಿಗೆ ಮಾತ್ರ ಮೀಸಲಾತಿ ದೊರೆಯುತ್ತದೆ.ಇಲ್ಲದಿದ್ದರೆ ಮೀಸಲಾತಿ ದೊರೆಯುವುದಿಲ್ಲ.ಶಿಕ್ಷಣ,ಉದ್ಯೋಗ ಸಿಗಬೇಕೆಂದರೆ ಮಾದಿಗ ಎಂದು ನಮೂದಿಸಬೇಕು. ಹಿಂಜರಿಕೆಯಿಂದ ಉಪ ಜಾತಿ ಕಲಂ ಖಾಲಿ ಬಿಟ್ಟರೆ ಅರ್ಜಿ ರಿಜೆಕ್ಟ್ ಆಗಲಿದೆ.ಎಲ್ಲಾ ರೀತಿಯ ಸೌಲಭ್ಯಗಳಿಂದಲೂ ವಂಚಿತರಾಗುತ್ತೀರಿ. ಈ ಎಚ್ಚರ ನಿಮಗೆ ಇರಲಿ, ಅದರಲ್ಲಿಯೂ ವಿದ್ಯಾವಂತರಾಗಿ, ಸರಕಾರಿ ನೌಕರಿ ಪಡೆದು, ಹಟ್ಟಿಗಳಿಂದಾಚೆ ಬದುಕುತ್ತಿರುವವರು ಹೆಚ್ಚು ಗಮನದಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಡಾ.ಬಾಬು ಜಗಜೀವನ್ ರಾಮ್ ರವರು ಅಪ್ಪಟ ಸ್ವಾತಂತ್ರ‍್ಯ ಸೇನಾನಿ. ಈ ದೇಶದಲ್ಲಿ ಸೋಲಿಲ್ಲದ ಸರದಾರ ಯಾರಾದರೂ ಇದ್ದರೆ ಅದು ಬಾಬುಜಿರವರು ಮಾತ್ರ. ಎಲ್ಲರ ಮೇಲೆ ತುಂಬಾ ಗೌರವ, ಪೂಜ್ಯನೀಯ ಭಾವನೆ ಇಟ್ಟವರು. ಯಾವುದೇ ಹುದ್ದೆಗೆ ಆಸೆ ಪಟ್ಟವರಲ್ಲ. ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ವ್ಯಕ್ತಿ ಧೋರಣೆಗೆ ಅನ್ಯಾಯ ಆಗಬಾರದು ಎಂಬ ಭಾವನೆಯಿಂದ ಹೋರಾಟ ಮಾಡಿದ್ದವರು. ಸಂವಿಧಾನ ಮತ್ತು ದಲಿತ-ದುರ್ಬಲರ ಅಸೆಯವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದು ಜಗಜೀವನ್ ರಾಮ್ ರವರು. ದಲಿತರಿಗೆ ಅಂಬೇಡ್ಕರ್ ಎಷ್ಟು ಮುಖ್ಯವೋ ಅಷ್ಟೇ ಬಾಬುಜಿ ಅವರು ಮುಖ್ಯ. ಇವರಿಬ್ಬರೂ ನಮ್ಮ ಸಮುದಾಯದ ಎರಡು ಕಣ್ಣುಗಳು ಎಂದು ಹೆಚ್.ಅಂಜನೇಯ ನುಡಿದರು.

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ,ನಾವು ನಮ್ಮ ಊರು,ನೆಲ,ಸಂಗಾತಿಯನ್ನು ಎಂದಿಗೂ ಮರೆಯಬಾರದು. ನನ್ನ ಸಮುದಾಯ ಸುಖದ ಬದುಕು ಕಾಣುವ ವರೆಗೆ ನನ್ನ ಸುಖದ ಬದುಕು ಸಾಗುವುದಿಲ್ಲ ಎಂಬ ಹೋರಾಟದ ಮನೋಭಾವದಿಂದ ಬದುಕಿದ ಹಲವು ಮಹನೀಯರು ನಮ್ಮ ಕಣ್ಮುಂದೆ ಇದ್ದಾರೆ. ಅಂತವರನ್ನು ಗುರುತಿಸಿ ಸರಕಾರವು ಬಾಬು ಜಗಜೀವನ್ ರಾಮ್ ಪ್ರಶಸ್ತಿ ನೀಡಿದೆ.ನಮ್ಮೊಳಗೆ ಪ್ರತಿಭಟನೆ ಕಿಚ್ಚು ಇರುತ್ತೆ. ಅದಕ್ಕೆ ನಾರಾಯಣ ಗುರು, ಅಂಬೇಡ್ಕರ್, ಲೋಹಿಯಾ ಅಂತವರ ಚಿಂತನೆಗಳು ಬಹು ಮುಖ್ಯ. ನಾವು ಓದುವ ಪ್ರಸ್ತುತ ಇತಿಹಾಸ ನಿಜ ಎಂದು ಒಪ್ಪಲಾಗದು. ಆದರೆ ನಮ್ಮ ಸಮುದಾಯಕ್ಕೆ ಹೋರಾಟ ಮಾಡಿದ ನಾಯಕರ ಶ್ರಮ ಗಮನಿಸಿದಾಗ ಇತಿಹಾಸದ ನೈಜ್ಯತೆ ಅರಿವಾಗುತ್ತದೆ ಎಂದು ನುಡಿದರು.

1001267921

ಒಳಮೀಸಲಾತಿ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ವ್ಯಕ್ತವಾಗಿವೆ.ಎಲ್ಲೆಡೆ ಒಳಮೀಸಲಾತಿ ಹೋರಾಟದ ಕಾವು ದೊಡ್ಡದಾಗಿದೆ.ಅದು ತಣ್ಣಗಾಗಲು ಬಿಡಬೇಡಿ. ಎಲ್ಲಾ ಮೀಸಲಾತಿ ವಿಚಾರಗಳು ನ್ಯಾಯಾಲಯಕ್ಕೆ ಹೋಗುತ್ತೆ. 2006 ರ ನಂತರ ಈ ದೇಶದಲ್ಲಿ ಮೀಸಲಾತಿ ಬಗ್ಗೆ ಚಳುವಳಿಗಳು ನಡೆದಿವೆ.ಆದರೆ ಅವುಗಳು ವಿವಾದದ ಕೇಂದ್ರ ಬಿಂದುಗಳಾಗುತ್ತಿವೆ. ಅಂಬೇಡ್ಕರ್ ಅವರು ಬ್ರಾಹ್ಮಣ ಮತ್ತು ಬಂಡವಾಳಶಾಹಿ ವಿರುದ್ಧ ಹೋರಾಟ ಮಾಡಿದ್ದರು.ಇಂದು ಅವುಗಳ ಜಾಗದಲ್ಲಿ ಕೋಮುವಾದ ಬಂದು ಕುಳಿತಿದೆ.ಬ್ರಾಹಣ್ಯದ ಬದಲಿಗೆ ಮುಸ್ಲಿಮರು ನಮ್ಮ ವಿರೋಧಿಗಳು ಎಂದು ಬಿಂಬಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.ದಲಿತರಲ್ಲಿ ಎಡ-ಬಲ,ಒಬಿಸಿ ಯಲ್ಲಿ ಕೆಳ-ಮೇಲೂ ಹೀಗೆ ಎಲ್ಲಾ ಸಮುದಾಯಗಳಲ್ಲೂ ಮೀಸಲಾತಿಗಾಗಿ ಬಡಿದಾಡುವಂತಾಗಿದೆ.ಆದರೆ ಶೇ.50ರ ಮೀಸಲಾತಿಯನ್ನು ಕೆಲವೇ ವರ್ಗಗಳು ಯಾವ ವಿವಾದವೂ ಇಲ್ಲದೆ ಅನುಭವಿಸುತ್ತಿವೆ.ಸರಕಾರಿ ಉದ್ಯೋಗದ ಶೇ.1ರಷ್ಟು ಹುದ್ದೆಗಳಿಗೆ ನಾವು ಕಚ್ಚಾಡುತ್ತಿದ್ದೇವೆ.ಆದರೆ ಖಾಸಗೀ ಕ್ಷೇತ್ರದ ಸುಮಾರು 90ರಷ್ಟು ಉದ್ಯೋಗ ಅಹಿಂದ ದಿಂದ ದೂರವೇ ಉಳಿದಿದೆ.ಹಾಗಾಗಿ ಒಳಮೀಸಲಾತಿ ಜಾರಿ ನಂತರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಇದೇ ರೀತಿಯ ಸಂಘಟಿತ ಹೋರಾಟ ನಡೆಬೇಕಾಗಿದೆ ಎಂದರು.

ಜವಾಹರ್‌ಲಾಲ್ ನೆಹರು ನಂತರ ಬಾಬು ಅವರು ಪ್ರಧಾನಿ ಆಗಬೇಕಿತ್ತು.ಬಾಬು ರವರ ಹೋರಾಟದ ಕಿಚ್ಚು ಮೆಚ್ಚುವಂತದ್ದು,ಅವರ ವಿದೇಶಿ ಜೊತೆಗಿನ ನಿಲುವುಗಳು ದೇಶದ ಐಕ್ಯತೆಯ ಸಂಕೇತ. ಬೆಂಬಲ ಬೆಲೆ, ನೀರಾವರಿ, ಗೊಬ್ಬರ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಮಾದರಿಯಾಗಿ ನಿಲ್ಲಬಲ್ಲ ವ್ಯಕ್ತಿ ಬಾಬು ಜಗಜೀವನ್ ರಾವ್. ಅವರು ಕಾರ್ಮಿಕರ ಪರವಾಗಿ ಸದಾ ಧ್ವನಿ ಎತ್ತಿದ್ದರು. ಇಂದು ಕಾರ್ಮಿಕ ಕಾಯ್ದೆಗಳನ್ನು ಮಾಡಿ ಅವರನ್ನು ತುಳಿಯಲಾಗುತ್ತಿದೆ. ಇಂದು ಪ್ರತಿಯೊಬ್ಬರ ಕೃಷಿಕರು ಬಾಬು ರವರನ್ನು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ದಿನೇಶ ಅಮಿನ್ ಮಟ್ಟು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ,ಅಭಿನಂದನೆ ಸ್ವೀಕರಿಸಿದ ಕೆ.ದೊರೆರಾಜು, ಕುಂದೂರ ತಿಮ್ಮಯ್ಯ, ಓಬಳೇಶ್ ಮಾತನಾಡಿದರು. 

ಉಪನ್ಯಾಸಕರಾದ ನರಸಿಂಹಮೂರ್ತಿ ಪ್ರಸ್ತಾವಿಕ ನುಡಿಗಳನ್ನಾಡಿದರು. 

 ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ವೈ.ಕೆ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. 

ಅಭಿನಂದನಾ ಸಮಾರಂಭದಲ್ಲಿ 2025 ನೇ ಸಾಲಿನ ಡಾ.ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪ್ರಗತಿಪರ ಚಿಂತಕ ಪ್ರೊ. ದೊರೆರಾಜು. ಕೆ, ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ, ಸಮಾಜಿಕ ಹೋರಾಟಗಾರ ಓಬಳೇಶ್ ಕೆ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖಂಡರಾದ ನರಸೀಯಪ್ಪ, ಕೊಟ್ಟ ಶಂಕರ್,ಪಿ.ಎನ್.ರಾಮಯ್ಯ, ಡಿಎಸ್.ಎಸ್ ಮಹಿಳಾ ಹೋರಾಟಗಾರರಾದ ಗಂಗಮ್ಮ,ಭಾನುಪ್ರಕಾಶ್ ಪಾವಗಡ,ಕದರಪ್ಪ ಮತ್ತಿತರು ಉಪಸ್ಥಿತರಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X