ಉಡುಪಿ | ಸರಕಾರದ ಆದೇಶವನ್ನು ಉಲ್ಲಂಘಿಸಿ ಸಂತ್ರಸ್ತರ ವಿಚಾರಣೆ – ಕೋಟ ನಾಗೇಂದ್ರ ಪುತ್ರನ್

Date:

Advertisements

ಮಲ್ಪೆ ಮಹಾಲಕ್ಷ್ಮಿಕೋ ಆಪರೇಟಿವ್ ಬ್ಯಾಂಕ್ ಸಂತ್ರಸ್ತರ ಹೋರಾಟ ಸಮಿತಿಯ ಸಭೆಯು ಇಂದು ಉಡುಪಿಯ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್, ನಾವು ಸುಮಾರು 8 ತಿಂಗಳಿಂದ ಕೋ. ಆಪರೇಟಿವ್ ಬ್ಯಾಂಕ್ ನಿಂದ ಆಗಿರುವ ಅನ್ಯಾಯದ ಬಗ್ಗೆ ನಿರಂತರ ಹೋರಾಟ ಮಾಡಿ, ಸಂಬಂಧಪಟ್ಟ ಎಲ್ಲ ಅಧಿಕಾರಿ ಅವರಿಗೂ ದೂರು ನೀಡಿದ್ದೇವೆ. ಆ ಪ್ರಕಾರವಾಗಿ ಸರಕಾರ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸರಕಾರದ ಅಧಿನಿಯಮ 64 ರಡಿ ಅಲ್ಲಿ ತನಿಖೆ ನಡೆಸಲು ಉಡುಪಿ ಜಿಲ್ಲಾ ಉಪ ನಿಬಂಧಕರು ಲಾವಣ್ಯ ಅವರನ್ನು ವಿಚಾರಣ ಅಧಿಕಾರಿಯಾಗಿ ಸರಕಾರ ನೇಮಿಸಿದೆ.

1004949043

ಆದರೆ ಸರಕಾರದ ಅಧಿನಿಯಮವನ್ನ ಪಾಲಿಸದ ಸಂತ್ರಸ್ತರನ್ನು ಬಾಯಿಗೆ ಬಂದಂತೆ ಬೈದು, ಹೆದರಿಸಿ, ಸಂತ್ರಸ್ತರು ಕೊಟ್ಟ ಹೇಳಿಕೆಯನ್ನು ತಿರುಚಿ ಮೋಸ ಮಾಡುವ ಉದ್ದೇಶದಿಂದಲೇ ಸರಕಾರ ಇವರಿಗೆ ಕೊಟ್ಟ (ಸರಕಾರಿ ಸಂಘಗಳ ಉಪ ನಿಬಂಧಕರು ಉಡುಪಿ ಜಿಲ್ಲೆ) ಜವಾಬ್ದಾರಿಯನ್ನು ಶಿರಸಿಯ ಒಂದು ಬ್ಯಾಂಕ್ ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತು ಆಗಿರುವ ಮಂಜುನಾಥ ಸಿಂಗ್ ಎಂಬ ವ್ಯಕ್ತಿಯಿಂದ ನಮ್ಮ ಸಂತ್ರಸ್ತರ ವಿಚಾರಣೆ ಮಾಡಿ, ಸರಕಾರದ ಆದೇಶವನ್ನು ಉಲ್ಲಂಘಿಸಿ ವಿಚಾರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

Advertisements

ಸಹಕಾರಿ ಸಂಘದ ಉಡುಪಿ ಉಪ ನಿಬಂಧಕರ ಕಛೇರಿಯಲ್ಲಿ ಬೇಕಾದಷ್ಟು ಜಾಗದ ವ್ಯವಸ್ಥೆಗಳು ಇದ್ದರು ಬಡಗುಬೆಟ್ಟಿನ ಜಗನ್ನಾಥ ಭವನದ ಕಟ್ಟಡದಲ್ಲಿ ಸಂತ್ರಸ್ತರಿಗೆ ಮೋಸ ಮಾಡುವ ಉದ್ದೇಶದಿಂದ ಅಮಾನತ್ತಿನಲ್ಲಿದ್ದ ಅಧಿಕಾರಿಯ ಮೂಲಕ ಸಂತ್ರಸ್ತರ ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆಯನ್ನು ಮರುತನಿಕೆ ಮಾಡುವಂತೆ ನಾವು ಉನ್ನತ ಮಟ್ಟದ ಅಧಿಕಾರಿಯವರನ್ನು ಭೇಟಿ ಮಾಡಿ ಕೇಳಿಕೊಂಡಿದ್ದೇವೆ. ಆ ಪ್ರಕಾರ ಅವರು ಮರು ತನಿಖೆಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಈ ಸಭೆಯ ಮೂಲಕ ಸಂತ್ರಸ್ತರಿಗೆ ಹೇಳುವುದು ಏನೆಂದರೆ ತಮಗೆ ಆಗಿರುವ ಅನ್ಯಾಯವನ್ನು ಮುಂದೆ ಬರುವ ವಿಚಾರಣ ಅಧಿಕಾರಿಯವರಲ್ಲಿ ವಿವರವಾಗಿ ತಿಳಿಸಿ ಮರು ತನಿಖೆಯಲ್ಲಿ ಭಾಗವಹಿಸಬೇಕು ಎಂದು ಕೇಳುತ್ತೇವೆ.

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಕೋ ಆಪರೇಟಿವ್ ವ್ಯವಸ್ಥೆ ಎಷ್ಟು ಭ್ರಷ್ಟ ಆಗಿದೆ ಎಂದರೆ ಇದರಿಂದ ಪಿ ಎಚ್ ಡಿ ಮಾಡಬಹುದು. ಕೆಲವೊಂದು ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ನೇಮಕಾತಿಗೆ 25 ಲಕ್ಷ ರೇಟ್ ಪಿಕ್ಸ್ ಮಾಡಿದ್ದಾರೆ ಕೋ ಆಪರೇಟಿವ್ ಎನ್ನುವುದು ಭ್ರಷ್ಟ ಆಗಿಹೋಗಿದೆ ಎಂದು ಹೇಳಿದರು.

1004949042

ಮಲ್ಪೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅನ್ನು ಹಿರಿಯರು ಕಷ್ಟ ಪಟ್ಟು ಕಟ್ಟಿದ್ದಾರೆ ಅಂತಹ ಬ್ಯಾಂಕಿಗೆ ಕಳಂಕ ತರಲು ಬಿಡಬಾರದು. ಪ್ರಸ್ತುತ ಉಡುಪಿಯ ಶಾಸಕರೇ ಬ್ಯಾಂಕಿನ ಅಧ್ಯಕ್ಷರು ಸಹ ಆಗಿದ್ದಾರೆ, ಶಾಸಕನಾಗಿದ್ದವರು ಅವರ ಮತದಾರರ ಸಮಸ್ಯೆಗಳನ್ನು ಆಲಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಹಿನ್ನಲೆಯಲ್ಲೆಯಾದರೂ ಸಂತ್ರಸ್ತರರನ್ನು ಕರೆಸಿ ಅವರಿಗೆ ನ್ಯಾಯವನ್ನು ಒದಗಿಸುವ ಕೆಲಸ ಶೀಘ್ರವಾಗಿ ಮಾಡಬೇಕು.

ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಅಪರಾಧ ಮಾಡಿರಬಹುದು ಆದರೆ ಕೇವಲ ಬ್ಯಾಂಕ್ ಮ್ಯಾನೇಜರ್ ನಿಂದ ಇಷ್ಟೆಲ್ಲಾ ಮಾಡಲು ಸಾಧವಾ ? ಸಂತ್ರಸ್ತರ ಸಹಿಯನ್ನು ಫಾರೆನ್ಸಿಕ್ ಗೆ ಕಳುಹಿಸಿ ಸರಿಯಾದ ತನಿಖೆ ಆಗಬೇಕು ಎಂದು ಹೇಳಿದರು.

ಸಂತ್ರಸ್ತರ ಪರ ನಿಂತದಕ್ಕೆ ಬ್ಯಾಂಕಿನಿಂದ ನನಗೆ ನೋಟೀಸು ಕಳುಹಿಸಿದರು ಅದಕ್ಕೆಲ್ಲ ಹೆದರದೆ ಸರಿಯಾದ ಉತ್ತರವನ್ನು ಸಹ ನಾನು‌ ಬ್ಯಾಂಕಿಗೆ ಕಳುಹಿಸಿದೆ. ಅನ್ಯಾಯವಾಗಿದೆ ಎಂದು ಯಾರೂ ಬಂದರೂ, ಅವರಿಗೆ ನ್ಯಾಯವನ್ನು ಕೊಡಿಸಲು ಅವರ ಪರವಾಗಿ ನಿಲ್ಲುವವನು ನಾನು. ಬೆದರಿಕೆಗೆ ಹೆದರುವವನಲ್ಲ, ಹೆದರಿಕೆ ಇದ್ದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.

ಬೀದಿರಂಪ ಆಗುವ ಮೊದಲು ಶಾಸಕರೇ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

1004949345

ಉಡುಪಿ ನಗರ ಸಭೆ ಸದಸ್ಯ ರಮೇಶ್ ಕಾಂಚನ್ ಸಂತ್ರಸ್ತರಿಗೆ ನ್ಯಾಯ ಸಿಗವ ವರೆಗೂ ನಿಮ್ಮ ಜೊತೆ ನಾನಿದ್ದೇನೆ ಎಂದು ಬೆಂಬಲ ಸೂಚಿದರು. ಸಂತ್ರಸ್ತರಾದ ದೀಪಕ್ ಶೆಣೈ, ಆಫ್ರೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಮಂದಿ ಸಂತ್ರಸ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X