ಭಾರತೀಯ ಬ್ಯಾಂಕುಗಳು 14,131.6 ಕೋಟಿ ರೂ. ಮೌಲ್ಯದ ನನ್ನ ಆಸ್ತಿಗಳನ್ನು ವಸೂಲಿ ಮಾಡಿವೆ. ತಾನು ಬ್ಯಾಂಕುಗಳಿಗೆ ಬಾಕಿಯಿದ್ದ ಮೊತ್ತಕ್ಕಿಂತ ದುಪ್ಪಟ್ಟು ವಸೂಲಿ ಮಾಡಲಾಗಿದೆ ಎಂದು ದೇಶ ಬಿಟ್ಟು ಪರಾರಿಯಾಗಿರುವ ಆರ್ಥಿಕ ಅಪರಾಧಿ, ಮದ್ಯದ ದೊರೆ ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ.
ಹಣಕಾಸು ಸಚಿವಾಲಯದ 2024-25ರ ವಾರ್ಷಿಕ ವರದಿಯಲ್ಲಿ ಜಾರಿ ನಿರ್ದೇಶನಾಲಯವು ಉದ್ದೇಶಪೂರ್ವಕವಾಗಿ ಮಾಡಿದ ಮರುಪಾವತಿಯ ವಿವರಗಳನ್ನು ಉಲ್ಲೇಖಿಸಿರುವ ಮಲ್ಯ 6,203 ಕೋಟಿ ರೂ.ಗಳಿಗೆ ಬದಲಾಗಿ ಬ್ಯಾಂಕುಗಳು ಈಗಾಗಲೇ 14,131.8 ಕೋಟಿ ರೂ.ಗಳನ್ನು ವಸೂಲಿ ಮಾಡಿವೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? WPL 2024 | ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆಯೇ ಪ್ರತ್ಯಕ್ಷವಾದ ವಿಜಯ್ ಮಲ್ಯ
“ಅಂತಿಮವಾಗಿ 6,203 ಕೋಟಿ ರೂಪಾಯಿ ವಸೂಲಿ ಮಾಡಬೇಕಾಗಿತ್ತು. ಆದರೆ 14,131.8 ಕೋಟಿ ರೂ. ವಸೂಲಿಯನ್ನು ಒಪ್ಪಿಕೊಂಡಿದ್ದೇನೆ. ಇದು ನನ್ನ ಯುಕೆ ದಿವಾಳಿತನ ರದ್ದತಿ ಅರ್ಜಿಯಲ್ಲಿ ಉಲ್ಲೇಖಿಸಲಾಗುತ್ತದೆ. ಇಲ್ಲಿನ ಕೋರ್ಟ್‌ಗಳು ಏನು ಹೇಳುತ್ತದೆ ಎಂಬ ಆಶ್ಚರ್ಯ ನನಗಿದೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಲ್ಯ ಮತ್ತು ಇತರ 10 ಜನರು ಸೇರಿದಂತೆ ಪರಾರಿಯಾದ ಆರ್ಥಿಕ ಅಪರಾಧಿಗಳ ವಿವರಗಳನ್ನು ಹಂಚಿಕೊಂಡ ವರದಿಯನ್ನು ಉಲ್ಲೇಖಿಸಲಾಗಿದೆ. ಈ ವರದಿಯು 36 ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಒಟ್ಟು 44 ಹಸ್ತಾಂತರ ವಿನಂತಿಗಳನ್ನು ವಿವಿಧ ದೇಶಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದೆ.
ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, ವಿಜಯ್ ಮಲ್ಯ ಪ್ರಕರಣದಲ್ಲಿ 14,131.6 ಕೋಟಿ ರೂ. ಮೌಲ್ಯದ ಮುಟ್ಟುಗೋಲು ಹಾಕಿಕೊಂಡ ಆಸ್ತಿಯ ಸಂಪೂರ್ಣ ಮೊತ್ತವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡಲಾಗಿದೆ.
Finally against a DRT judgement debt of Rs 6203 crores, admitted recovery of Rs 14,131.8 crores which will be evidence in my UK Bankruptcy annulment application. Wonder what Banks will say in an English Court. pic.twitter.com/oRSMhm4nx2
— Vijay Mallya (@TheVijayMallya) April 6, 2025
2016ರ ಮಾರ್ಚ್‌ನಲ್ಲಿ ಯುಕೆಗೆ ಪಲಾಯನವಾದ ಮಲ್ಯ ಒಡೆತನ ಕಿಂಗ್‌ಫಿಷರ್ ಏರ್‌ಲೈನ್ಸ್ (ಕೆಎಫ್‌ಎ) ಹಲವು ಬ್ಯಾಂಕುಗಳಿಗೆ 9,000 ಕೋಟಿ ರೂ.ಗಳ ಸಾಲ ಮರುಪಾವತಿ ಬಾಕಿ ಉಳಿಸಿತ್ತು. ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ಮಲ್ಯ ಪರಾರಿಯಾಗಿದ್ದರು. ಆದರೆ ವಾರ್ಷಿಕ ಶೇಕಡ 11.5 ಬಡ್ಡಿದರದಲ್ಲಿ 6,203 ಕೋಟಿ ರೂ.ಗಳನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೆಂಗಳೂರಿನ ಡಿಆರ್‌ಟಿ ಪೀಠ 2017ರಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಆದೇಶಿಸಿತ್ತು.
ಈ ನಡುವೆ ಇಂದಿಗೂ ಭಾರತವು ಯುಕೆಯಿಂದ ಮಲ್ಯ ಅವರನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಇನ್ನು ತಾನು ಶೇಕಡ 100ರಷ್ಟು ಸಾಲ ಮರುಪಾವತಿಗೆ ಸಿದ್ಧನಾಗಿದ್ದೆ. ಆದರೆ ಬ್ಯಾಂಕುಗಳು ಮತ್ತು ಸರ್ಕಾರ ಬೇಡ ಎಂದಿದೆ ಎಂದು ಮಲ್ಯ ಇತ್ತೀಚೆಗೆ ಹೇಳಿಕೊಂಡಿದ್ದರು.
