ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರದ ಆದೇಶದಂತೆ ಕೂಡಲೇ ಹಗಲು 7 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಜೆಸ್ಕಾಂ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘ ಮುಖಂಡ ಬಿ.ಗೋಣಿಬಸಪ್ಪ ಮಾತನಾಡಿ, “ರೈತರ ಕೃಷಿ ಪಂಪ್ ಸೆಟ್ಟುಗಳಿಗೆ ಸರ್ಕಾರದ ಆದೇಶದಂತೆ ಹಗಲು 07 ಗಂಟೆ ವಿದ್ಯುತ್ ಪೂರೈಕೆ ಮಾಡಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. 66/11 ಕೆ.ವಿ ತಂಬ್ರಹಳ್ಳಿ ವಿದ್ಯುತ್ ಉಪಕೇಂದ್ರದ 2×12.8 MVA ಪರಿವರ್ತಕದ ಮೇಲೆ ಹೆಚ್ಚುವರಿ ಭಾರ ಆಗಿರುವುದರಿಂದ ಗುಣಮಟ್ಟದ ವಿದ್ಯುತ್ ಪೂರೈಸಲು ಆಗುತ್ತಿಲ್ಲ. ಇದನ್ನು 2 x 20 ವಿದ್ಯುತ್ ಪರಿನಿರ್ತಕ ಅಳವಡಿಸಲು ಈ ಹಿಂದೆ ಒತ್ತಾಯ ಮಾಡಿದ್ದೇವೆ. ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭ ಆಗಿರುವುದಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದರೂ ಸಹ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಈ ಕೂಡಲೇ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
.
ರೈತ ಮುಖಂಡ ಬಾಣದ ಶಿವಪ್ಪ ಮಾತನಾಡಿ, ತಾಲೂಕಿನ ತೆಲುಗೋಳಿ ಹಾಗೂ ಜಿ.ಕೋಡಿಹಳ್ಳಿ ಗ್ರಾಮಗಳಲ್ಲಿ ಹೊಸದಾಗಿ ಸ್ಥಾಪನೆಯಾಗಬೇಕಾದ 66/11 ಕೆ.ವಿ. ವಿದ್ಯುತ್ ಉಪಕೇಂದ್ರ ಕಾಮಗಾರಿಗಳು ನಡೆದಿರುವುದಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದರೂ ಸಹ ಕಾಮಗಾರಿ ಪ್ರಾರಂಭವಾಗಿರುವುದಿಲ್ಲ. ಕೂಡಲೇ ಪ್ರಾರಂಭಿಸಬೇಕು. ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಕಳೆದ 05 ವರ್ಷಗಳಿಂದ ಯಾವುದೇ ಕಾಮಗಾರಿಗಳು ನಡೆದಿರುವುದಿಲ್ಲ. ಶೀಘ್ರ ಸಂಪರ್ಕ ಯೋಜನೆ ಅಡಿಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ವಿತರಿಸುತ್ತಿಲ್ಲ. ಮತ್ತು ಯಾವುದೇ ಕೆಲಸಗಳು ರೈತರಿಗೆ ಆಗಿರುವುದಿಲ್ಲ” ಎಂದು ದೂರಿದರು.
ಈ ಸುದ್ಧಿ ಓದಿದ್ದಿರಾ?;ಕೊಪ್ಪಳ | ಕೈಗಾರಿಕಾ ತ್ಯಾಜ್ಯದಿಂದ ಪರಿಸರ ಮಾಲಿನ್ಯ; ಕಲ್ಯಾಣಿ ಸ್ಟೀಲ್ ಕಂಪನಿ ವಿರುದ್ಧ ಆಕ್ರೋಶ https://eedina.com/karnataka/koppal-environmental-pollution-due-to-industrial-waste-outrage-against-kalyani-steel-company/2025-04-09/
ಮೆಹ್ಬೂಬ್ ಸಾಹೆಬ್, ಮುದಕಪ್ಪ. ಬಿ, ಹರಟಿ ಕಾಳಪ್ಪ, ವಿ ನಾಗೇಂದ್ರ, ಕೆ.ನಿಂಗಪ್ಪ, ಕೆ.ಶಿವಪ್ಪ, ಹೆಚ್.ಶೇಕ್ರಪ್ಪ ಎ.ಡಿ.ಹಳ್ಳಿ, ಒತಪ್ಪ ಬಣಕಾರ, ಬಾಣದ ಶಿವಪ್ಪ, ಎ.ಬಸವರಾಜ್, ಹೆಚ್.ನಾಗರಾಜ್, ಜಿ.ವಸಂತಕುಮಾರ್, ರವಿಕುಮಾರ್ ತಂಬ್ರಳ್ಳಿ, ಹೆಚ್.ಮಹೇಶ, ಗಡ್ಡಿ ನಿಂಗಪ್ಪ, ಬಿ.ಸರಣಪ್ಪ, ಕೆ.ನಾಗೇಂದ್ರ ಹಾಗೂ ಇತರರು.
