ನನ್ನ ಮೇಲೆ ಸುದೀಪ್‌ಗೆ ತುಂಬಾನೆ ಪ್ರೀತಿ ಇದೆ. ಗೀತಾ ಅವರ ಮೇಲೆ ವಿಶೇಷ ಗೌರವ ಇದೆ. ನಮ್ಮಲ್ಲಿ ಕೆಲ ವಿಚಾರಕ್ಕೆ ಸಣ್ಣ-ಪುಟ್ಟ ಮನಸ್ತಾಪ ಇರಬಹುದು. ಆದರೆ, ಎಂದಿಗೂ ದ್ವೇಷ ಬೆಳೆದಿಲ್ಲ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
”ನನಗಾಗಿ ಸಿನಿಮಾ ಡೈರೆಕ್ಷನ್ ಮಾಡೋದಾಗಿ ಸುದೀಪ್ ಹೇಳಿದ್ದರು. ಆದರೆ, ಅದು ಆಗಲೇ ಇಲ್ಲ. ಹೀಗಾಗಿಯೇ, ಇಬ್ಬರೂ ‘ದಿ ವಿಲನ್’ ಮಾಡಿದೆವು. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ” ಎಂದು ಹೇಳಿದ್ದಾರೆ.
“ನಾನು ಮತ್ತು ಸುದೀಪ್ ಕೆಸಿಸಿಯಲ್ಲಿ ಒಟ್ಟಿಗೆ ಆಡಿದ್ದೇವೆ. ಹಲವು ಬಾರಿ ಸುದೀಪ್ ಬಂದಿದ್ದಾರೆ. ನಮ್ಮೊಂದಿಗೆ ಖುಷಿಯಿಂದ ಮಾತಾಡುತ್ತಾರೆ. ಇತ್ತೀಚೆಗೆ ಮನೆಗೆ ಬಂದಿದ್ದಾಗ ಭಾವುಕರಾಗಿದ್ದರು” ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್ ಸಮಸ್ಯೆಗೆ ತುತ್ತಾಗಿದ್ದರು. ಅಮೆರಿಕಗೆ ಹೋಗಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಂದಿದ್ದಾರೆ. ಅವರು ಅಮೆರಿಕಗೆ ಹೋಗುವ ಮುನ್ನ ಶಿವರಾಜ್‌ಕುಮಾರ್ ಅವರನ್ನು ಸುದೀಪ್ ಭೇಟಿ ಮಾಡಿ ಧೈರ್ಯ ತುಂಬಿದ್ದರು.