ಬೆಲೆ ಏರಿಕೆಯಿಂದ ರಾಜ್ಯದ ಜನರು ಕೆಂಗಟ್ಟಿದ್ದು ಜನರು ಹೊರ ರಾಜ್ಯಗಳಿಗೆ ಗೂಳೆ ಹೋಗುತ್ತಿದ್ದಾರೆ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಸಹಿ ಸಂಗ್ರಹ ಆಂದೋಲನ ಮೂಲಕ ಒತ್ತಾಯಿಸಿದರು.
ಲಿಂಗಸುಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸರ್ಕಾರದ ವಿರುದ್ಧ ಹತ್ತಾರು ಮಹಿಳೆಯರು ಸೇರಿ ಸಹಿ ಸಂಗ್ರಹ ಆಂದೋಲನ ನಡೆಸಿದರು.
ರಾಜ್ಯದ ಜನರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದು ,ಸರಿಯಾದ ಸಮಯಕ್ಕೆ ಮಳೆಯಿಲ್ಲದೆ ರೈತರು ಕೂಡ ಸಂಕಷ್ಟದಲ್ಲಿ ಸಿಲುಕಿದ್ದಾರೆ ಈ ಮಧ್ಯದಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಸಿದ್ದು ವಿಪರ್ಯಾಸ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೊಲೆ ಪ್ರಕರಣ: ಮೂವರಿಗೆ ಗಲ್ಲು, ಒಂಬತ್ತು ಮಂದಿಗೆ ಜೀವಾವಧಿ
ರಾಜ್ಯದ ಜನರು ಹಿಂದೆ ಆಡಳಿತ ಸರ್ಕಾರವನ್ನು ಕಿತ್ತೆಸೆದು ಜನಸಾಮಾನ್ಯರ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಮುಂದಾಗಿದ್ದು ಜನರ ನಂಬಿಕೆಯ ಜೊತೆ ಆಟವಾಡಬೇಡಿ ಮುಂದೆ ಬುದ್ಧಿ ಕಲಿಸಲು ಸಿದ್ದ ಎಂದು ಸಂದೇಶದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಮುಖಂಡರಾದ ಶುಗಂದಿ,ಶಾಂತಮ್ಮ, ಕನಕ ಬಾನುಬೆಗಂ, ಈರಮ್ಮ ಅಂಬ್ರಮ್ಮ, ತಯ್ಯಬಾ, ಸಹರಾ, ಗಾಯಿತ್ರಿ, ಸಿಐಟಿಯು ಮುಖಂಡರಾದ ನಿಂಗಪ್ಪ ವೀರಾಪೂರು, ಅಲ್ಲಾಭಕ್ಷ ದೇವಪೂರು, ಹಾಜಿ ಬಾಬು ಕಟ್ಟಿಮನಿ, ವೆಂಕಟೇಶ್ ಪೂರಮ್ಯಾನ್, ಶ್ರೀಧರ,ಖಾಜಾಮೈನುದ್ದಿನ್, ಫಯಾಜ್ ಬಂಡಿ, ಇತರರು ಇದ್ದರು.