ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಇಂದು ಬೆಳಿಗ್ಗೆಯಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು. ಇದೀಗ ಸುರಿದ ಭಾರೀ ಮಳೆಯಿಂದ ಸ್ಥಳೀಯರು ತುಸು ನಿಟ್ಟುಸಿರು ಬಿಟ್ಟಿದ್ದಾರೆ.
ಗಾಳಿ ಸಹಿತ ಜೋರಾಗಿ ಮಳೆ ಸುರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಎಂಬಲ್ಲಿ ಬೃಹತ್ ಗಾತ್ರದ ತೆಂಗಿನ ಮರ ಹೆದ್ದಾರಿ ಮಧ್ಯೆ ಬಿದ್ದಿದೆ. ಜತೆಗೆ ವಿದ್ಯುತ್ ಕಂಬ ನೆಲಕ್ಕರುಳಿದೆ. ಹೀಗಾಗಿ ಕೆಲವು ಸಮಯದವರೆಗೆ ವಾಹನ ಸಂಚಾರಕ್ಕಾಗಿ ಸವಾರು ಪರದಾಡುವಂತಾಗಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು.
ಈ ಸುದ್ದಿ ಓದಿದ್ದೀರಾ? ಸರಕುಗಳ ರಫ್ತಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಂ.1: ಉದ್ಯೋಗ ಸೃಷ್ಟಿಯಾಗಬಹುದೇ?
ಈ ಬಾರಿ ಕರಾವಳಿ ಜಿಲ್ಲೆಗಳಲ್ಲಿಯೂ ಕೂಡ ಹೆಚ್ಚು ತಾಪಮಾನ ದಾಖಲಾಗಿರುವ ಬಗ್ಗೆ ವರದಿಯಾಗಿತ್ತು. ಆದರೆ ಇಂದು ಸುರಿದಿರುವ ಮಳೆಯಿಂದ ತುಸು ನಿರಾಳತೆ ಕಂಡುಬಂದಿದೆ.