ಸಂವಿಧಾನ ಸಂರಕ್ಷಕರ ಸಮಾವೇಶದ ಹಿನ್ನೆಲೆಯಲ್ಲಿ ದೇಶ ಉಳಿಸುವ ಮಹಾಯಾನ ಆಂದೋಲನ ಭಾಗವಾಗಿ “ಎದ್ದೇಳು ಕರ್ನಾಟಕ ತಂಡ ಸಂವಿಧಾನ ಯಾನ” ಸಂಘಟನೆಯ ಸದಸ್ಯರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳನ್ನು ಭೇಟಿ ಮಾಡಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಯ ಬಗ್ಗೆ ಗಂಭೀರವಾದ ಸಂವಾದ, ಚರ್ಚೆ ನಡೆಸಿದರು.

ಪ್ರಸ್ತುತ ಇಡೀ ದೇಶದಲ್ಲಿ ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲೂ ತಾಂಡವವಾಡುತ್ತಿದೆ. ರಾಜಕೀಯ ಕ್ಷೇತ್ರವನ್ನು ಸುಧಾರಣೆ ಮಾಡಲಿಕ್ಕೆ ಶ್ರೀಗಳು ಇತ್ತೀಚಿಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದು, ಸರ್ವೋದಯಕ್ಕಾಗಿ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರ ಸಂವಾದವೂ ಸೇರಿದಂತೆ
ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಹಾಗಾಗಿ ನಾವು ನೀವು ಸೇರಿ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಇನ್ನು ಒಳ್ಳೆಯ ಕೆಲಸ ಕಾರ್ಯಗಳನ್ನು ಸಮಾಜದಲ್ಲಿ ಮಾಡಲಿಕ್ಕೆ ಉತ್ತಮ ಆಡಳಿತವನ್ನು ತರಲಿಕ್ಕೆ, ಅನ್ಯಾಯವನ್ನು ಪ್ರತಿಭಟನೆ ಮಾಡಲಿಕ್ಕೆ ಸಹಕಾರಿಯಾಗುತ್ತದೆ ಎನ್ನುವ ಆಶಯವನ್ನಿಟ್ಟುಕೊಂಡು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಜೊತೆಗೆ ಮುಕ್ತವಾಗಿ ಚರ್ಚೆ ಮಾಡಿದರು.

‘ಹಾಗೂ ಇಂತಹುದೇ ಕಾರ್ಯಕ್ರಮದ ಭಾಗವಾಗಿ 2025 ಏಪ್ರಿಲ್ 26ರ ಶನಿವಾರದಂದು ‘ಸಂವಿಧಾನ ಸಂರಕ್ಷಕರ ಸಮಾವೇಶ’ ದಾವಣಗೆರೆಯಲ್ಲಿ ನಡೆಯಲಿದೆ. ಇದಕ್ಕೆ ತಮ್ಮ ಬೆಂಬಲ ಹಾಗೂ ಮಾರ್ಗದರ್ಶನ ಇರಲಿ’ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿಯಿಲ್ಲ, ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಾಗಲಿದೆ: ಶಾಸಕ ಶಿವಗಂಗಾ ಬಸವರಾಜ್.
ಚರ್ಚೆಯಲ್ಲಿ ನೂರ್ ಶ್ರೀಧರ್, ತಾರಾರಾವ್, ವೀರಸಂಗಯ್ಯ, ಮಲ್ಲಿಗೆ ಸಿರಿಮನೆ, ಗಿರಿಜಾ, ಮುನ್ನಾರವರು ಸುಮಾರು ಎರಡು ಗಂಟೆಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದರು.