ವೈದ್ಯಕೀಯ ಸಹಾಯದ ಅಗತ್ಯವಿರುವ ಸಂಬಂಧಿಕರನ್ನು ನೋಡಿಕೊಳ್ಳುವ ಅಗತ್ಯವಿರುವ ಕಾರಣದಿಂದ ದೇಶದಿಂದ ಹೊರಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನಕ್ಕೆ ಗೈರುಹಾಜರಾಗಲಿದ್ದಾರೆ.
ಎಐಸಿಸಿ ಅಧಿವೇಶನಕ್ಕೆ ಎರಡು ನಿರ್ಣಯಗಳು ಸೇರಿದಂತೆ ಮೂರು ನಿರ್ಣಯಗಳನ್ನು ಚರ್ಚಿಸಲಾದ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲೂ ಅವರು ಹಾಜರಿರಲಿಲ್ಲ.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ ಬಗ್ಗೆ ಚರ್ಚೆ ವೇಳೆ ರಾಹುಲ್ ಗಾಂಧಿ ಮೌನ ಸರಿಯೇ?
ಗೈರು ಹಾಜರಿಯ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ಸಂಸತ್ತಿನ ಬಜೆಟ್ ಅಧಿವೇಶನ ಮತ್ತು ಎಐಸಿಸಿ ಅಧಿವೇಶನದ ಕೊನೆಯ ಹಂತಕ್ಕೆ ಹಾಜರಾಗಲು ಸಾಧ್ಯವಿಲ್ಲವೆಂದು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಅನುಮತಿ ಕೋರಿರುವುದಾಗಿ ತಿಳಿಸಿದರು.
“ಅವರು ಈಗಾಗಲೇ ಎಐಸಿಸಿ ಅಧಿವೇಶನ ಮತ್ತು ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ರಜೆ ಕೋರಿದ್ದರು. ಅವರು ವಿದೇಶದಲ್ಲಿ ಕೆಲವು ಪೂರ್ವಭಾವಿ ಕೆಲಸವನ್ನು ಹೊಂದಿದ್ದರು. ಪಕ್ಷವು ಅವರಿಗೆ ರಜೆ ನೀಡಿದೆ” ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಅವರು ಲೋಕಸಭೆಯಲ್ಲಿ ಗೈರುಹಾಜರಾಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಪ್ರಿಯಾಂಕಾ ಅವರು ಸಂಸದೆಯಾಗಿ ಆಯ್ಕೆಯಾದ ಕೇರಳದ ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ಸ್ಪಷ್ಟಣೆಯನ್ನು ನೀಡಿದ್ದಾರೆ.
