ನಿನ್ನೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಬಾ ಅಹಮದಿ ಶೇ.95.67% (600/574) ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ನಗರದ ಅಮೀರ್ ಅಹಮದ್ ಕಾಲೋನಿಯ ಮೊಹಮ್ಮದ್ ಹುಸೇನ್ ಪುತ್ರಿಯಾಗಿದ್ದು, ಪೋಷಕರು ಹಾಗೂ ಕಾಲೇಜು ಸಂಸ್ಥೆ ಶುಭ ಕೋರಿದ್ದಾರೆ.
ನಿಬಾ ಅವರ ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿರಲಿ ಎಂದು ಈ ದಿನ ಡಾಟ್ ಕಾಮ್ ಶುಭಾಶಯ ತಿಳಿಸುತ್ತಿದೆ.