ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲ್ಲೂಕಿನ ಮಾಳನಾಯಕನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಸೋಮವಾರ ರಾತ್ರಿ ತಾಲೂಕಿನ ತುಮ್ಮಿನಕಟ್ಟಿ ರಸ್ತೆಯ ಮಾಳನಾಯನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ. ರಾಣಿಬೆನ್ನೂರ ತಾಲೂಕಿನ ಕುಪ್ಪೇಲೂರ ಗ್ರಾಮದ ಪರಶುರಾಮ ಸಿದ್ದಪ್ಪ ಬೆಳಗಾವಿ(28) ಮೃತ ದುರ್ದೈವಿ.
“ಮೃತ ವ್ಯಕ್ತಿ ತುಮ್ಮಿನಕಟ್ಟಿ ರಸ್ತೆಯಲ್ಲಿ ಹೋಗುವಾಗ ಯಾವುದೋ ಅಪರಿಚಿತ ವಾಹನವು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಏ.11ರಂದು ʼಅಂಬೇಡ್ಕರ್ ಹಬ್ಬʼದ ಉದ್ಘಾಟನೆ
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
