“ಕರ್ನಾಟಕ ರಾಜ್ಯ ಸರ್ಕಾರ ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಮೇಲೆ ದಿಡೀರ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಹೇಳಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ತಹಸೀಲ್ದಾರ್ ಕಛೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಜನರು ನಿತ್ಯ ಬಳಕೆ ಮಾಡುವ ಹಾಲು, ವಿದ್ಯುತ್, ಡೀಸೆಲ್, ಬಸ್ಸಿನ ದರ ಮತ್ತು ಇತರೆ ವಸ್ತುಗಳ ಬೆಲೆಯನ್ನು ದಿಢೀರ ಬೆಲೆ ಏರಿಸಿ ಕಡು ಬಡವರ, ಕೂಲಿ ಕಾರ್ಮಿಕರ, ರೈತರ ಹಾಗೂ ಮಧ್ಯಮ ವರ್ಗದವರ ಜೀವನದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ಆಡಳಿತಕ್ಕೆ ಬಂದ ಸರ್ಕಾರ ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ವಾಪಾಸ ತೆಗೆದುಕೊಳ್ಳುತ್ತಿದೆ” ಎಂದು ಕಿಡಿಕಾರಿದರು.
“ಈಗ ಏಕಾಏಕಿ ಹಂತ ಹಂತವಾಗಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಸುವುದರಿಂದ ಬಡವರು ಜೀವನ ನಡೆಸುವುದು ಕಷ್ಟಕರವಾಗಿದೆ. ಬೆಲೆ ಏರಿಕೆಯಿಂದ ಬಡವರು ಬಡವರಾಗಿ ಉಳಿಯುತ್ತಿದ್ದಾರೆ. ಸರ್ಕಾರ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಪ್ರತಿ ಲೀಟರ ಹಾಲಿಗೆ 10 ರೂ ಪ್ರೋತ್ಸಾಹ ಧನ ನೀಡಿ, ಹಾಲು ಮತ್ತು ಇತರೆ ವಸ್ತುಗಳ ಬೆಲೆಯನ್ನು ಯಥಾಸ್ಥಿತಿಗೆ ಮುಂದುವರೆಸಬೇಕು”ಎಂದು ಯಲ್ಲಪ್ಪ ಮರಾಠೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಗೌರವಧ್ಯಕ್ಷ ಗಂಗಾಧರ ಪಾಟೀಲ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಸಂಘಟನೆಯ ಕಾರ್ಯಕರ್ತರು ಯೂಸುಫ್ ಸೈಕಲಗಾರ, ಪ್ರಕಾಶ ಡಂಬರ, ಖಲಂದ ಎಲೆದಹಳ್ಳಿ, ದಾದಾಪಿರ ಮಲ್ಲಾಡದ, ರಾಜು ಸುಂಕದ, ಮಹಾಂತೇಶ ಬಣಕಾರ, ರಾಜಾಭಕ್ಷ ಮಾನೆಗಾರ, ಈರಪ್ಪ ಅಂಗಡಿ ಇನ್ನೂ ಅನೇಕರು ಉಪಸ್ಥಿತರಿದ್ದರು.
