ಚಲಿಸುತ್ತಿದ್ದ ಬೈಕ್ʼಗೆ ಕಾರು ಡಿಕ್ಕಿ ಓಡೆದು ಕಾರಿನ ಚಾಲಕ ಎಸ್ಕೇಪ್ ಆಗಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ರಾಜ್ಯ ಹೆದ್ದಾರಿ, ಖಾಂಡ್ಯ ಸಮೀಪದ ಬೆಳಸೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಪ್ರವಾಸಿಗರು. ವಿದ್ಯುತ್ ಲೈನ್ ದುರಸ್ಥಿಗಾಗಿ ಖಾಂಡ್ಯ ಗ್ರಾಮಕ್ಕೆ ತೆರಳುತ್ತಿದ್ದ ಲೈನ್ ಮ್ಯಾನ್ ಅವಿನಾಶ್ ಎಂಬ ವ್ಯಕ್ತಿ ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದೆಯಿಂದ ಕಾರು ಡಿಕ್ಕಿ ಓಡೆದ ಪರಿಣಾಮ ಲೈನ್ ಮ್ಯಾನ್ ಅವಿನಾಶ್ ಗೆ ಗಂಭೀರ ಗಾಯವಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಗಾಂಜಾ ಸಾಗಾಟ: ಇಬ್ಬರ ಬಂಧನ
ಕಾರು ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ದೃಶ್ಯವನ್ನು ಹಿಂಬದಿಯಿಂದ ಚಲಿಸುತ್ತಿದ್ದ ಬೈಕ್ ಸವಾರನ ಮೊಬೈಲ್ ನಲ್ಲಿ ಸೆರೆಯಾಗಿದೆ, ಈ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
