ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಈಚೆಗೆ ಸಿಡಿಲು ಬಡಿದು ಮೃತಪಟ್ಟಿರುವ ರಾಮಣ್ಣನಾಯಕ ಕುಟುಂಬಕ್ಕೆ ಮಸ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಐದು ಲಕ್ಷ್ಯ ಪರಿಹಾರ ಧನದ ಚೆಕ್ ವಿತರಿಸಿದರು.
ಗ್ರಾಮದ ಹೊರವಲಯದಲ್ಲಿ ನಿನ್ನೆ ರಾತ್ರಿ ಕುರಿಗಳನ್ನು ಮೇಯಿಸಿ ಬರುವಾಗ ಈ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.ಸಾವಿನ ಸುದ್ದಿ ಕೇಳಿ ಇಡೀ ಗ್ರಾಮವೇ ತಲ್ಲಣವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು |ನರೇಗಾ ಯೋಜನೆಯಲ್ಲಿ ಅವ್ಯವಹಾರ; ಅಮಾನತಿಗೆ ಒತ್ತಾಯ
ಶಾಸಕ ಹಾಗೂ ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಸಿಡಿಲು ಬಡಿದು ಮೃತಪಟ್ಟಿರುವ 24 ಗಂಟೆಯ ಒಳಗಡೆ ಐದು ಲಕ್ಷ್ಯ ಪರಿಹಾರ ವಿತರಿಸಿದ್ದು ಶಾಸಕರು ಸಾರ್ವಜನಿಕರಲ್ಲಿ ಬಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.