ಕೊಪ್ಪಳ | ಫ್ಯಾಸಿಸ್ಟ್‌ ದಾಳಿಯಿಂದ ದೇಶದ ಒಕ್ಕೂಟ ವ್ಯವಸ್ಥೆ ರಕ್ಷಿಸಿ: ಸಿಪಿಐಎಂಎಲ್‌ ಆಗ್ರಹ

Date:

Advertisements

ಕೋಮುವಾದಿ ಫ್ಯಾಸಿಸ್ಟ್ ದಾಳಿಯಿಂದ ದೇಶದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿ, ಕೃಷಿ ಈ ಮಸೂದೆಯನ್ನು ಕೈಬಿಡಿ ಎಂದು ಭಾರತದಾದ್ಯಂತ ಸಿಪಿಐ(ಎಂಎಲ್) ಮಾಸ್‌ಲೈನ್ ಆಗ್ರಹಿಸಿತು.

ಕರ್ನಾಟಕ ರಾಜ್ಯ ಸಿಪಿಐ(ಎಮ್‌ಎಲ್) ಕೊಪ್ಪಳ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ಪ್ರತಿಭಟನೆಯ ಹಕ್ಕೊತ್ತಾಯವನ್ನು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಪ್ರತಿನಿಧಿ ಮೂಲಕ ಮನವಿ ಸಲ್ಲಿಸಲಾಯಿತು.

ಟಿಯುಸಿಐನ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ ಮಾತನಾಡಿ, “ದೇಶದ ಕಾರ್ಮಿಕ ವರ್ಗ ಉದ್ಯೋಗ ಭದ್ರತೆಗಾಗಿ, ನ್ಯಾಯಯುತ ವೇತನಕ್ಕಾಗಿ, ಟ್ರೇಡ್ ಹಕ್ಕುಗಳ ರಕ್ಷಣೆಗಾಗಿ ಹಾಗೂ ರೈತಾಪಿ ವರ್ಗದ ಎಂಎಸ್‌ಪಿ ಕಾನೂನು ಖಾತರಿಗಾಗಿ, ಸಾಲ ಮನ್ನಾಕ್ಕಾಗಿ. ಕ್ಷ ಕಾಯ್ದೆ ರದ್ಧತಿಗಾಗಿ ಹೋರಾಡುತ್ತಿದೆ. ಭೂರಹಿತ ಬಡವರು, ಆದಿವಾಸಿಗಳು ಭೂಮಿಗಾಗಿ ಅರಣ್ಯ ಹಕ್ಕು ಅನುಷ್ಠಾನಕ್ಕಾಗಿ, ಜಲ-ಜಂಗಲ್-ಜಮೀನು ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ದಲಿತರು. ಹಿಂದುಳಿದ ಜನರು ಸಾಮಾಜಿಕ ಸಮಾನತೆಗೆ, . ಅಲ್ಪಸಂಖ್ಯಾತರು ಬುಲ್ಲೋಜ್ ದುರ್ದಾಳಿಯಿಂದ ತತ್ತರಿಸಿದ್ದಾರೆ. ಹತ್ತು ಹಲವು ಸಮಸ್ಯಗಳಿಂದ ದೇಶ ದಿವಾಳಿಯಾಗಿದೆ. ಅದರೆ, ದೇಶದ ಜನರ ಗಮನ ಬೇರೆಡೆ ಸೆಳೆಯಲು ಔರಂಗ್‌ಜೇಬ್‌ ಸಮಾಧಿ ನಾಶಪಡಿಸುವುದು ಕೋಮುವಾದ ಸೃಷ್ಟಿಸಿ ದೇಶದ ಜನತೆಗೆ ದ್ರೋಹ ಬರೆಯುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

Advertisements

ಬಸವರಾಜ್ ನರೇಗಲ್ ಮಾತನಾಡಿ, “ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಕಳೆದ ಅಧಿವೇಶನದ ಮಾರ್ಕೆಟಿಂಗ್ ನೀತಿಯ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಈ ಮಸೂದೆ 2020ರಲ್ಲಿ ಜಾರಿಗೊಳಿ. ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಪೂರಕವಾಗಿರುತ್ತದೆ. ಈ ಮಾರ್ಕೆಟಿಂಗ್ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸಿ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಮಾರುಕಟ್ಟೆಗಳು ಕಾರ್ಪೋರೇಟ್ ಕಂಪನಿಗಳ ನಿಯಂತ್ರಣಕ್ಕೊಳಪಟ್ಟು, ಆಹಾರ ಕ್ಷೇತ್ರದ ಮೇಲೆ ಕಂಪನಿಗಳ ನೇರ ಹಿಡಿತ ಸಾಧಿಸಲಾಗುತ್ತದೆ. 23 ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ವರದಿ ಆಧರಿಸಿ ಕನಿಷ್ಠ ಬೆಂಬಲ ನೀಡಲಾಗಿದೆ ಎಂದು ಜುಮ್ಲಾ ಬಿಡಲಾಗುತ್ತಿದೆ” ಎಂದರು.

ಡಿ.ಎಚ್.ಪೂಜಾರ ಮಾತನಾಡಿ, “ಮಾರ್ಕೆಟಿಂಗ್ ವಿಧೇಯಕ ಮಸೂದೆಯಲ್ಲಿ 23 ಕೃಷಿ ಉತ್ಪನ್ನಗಳ ಪ್ರಸ್ತಾಪ ಇರುವುದಿಲ್ಲ. 2025-26 ಕೇಂದ್ರ ಬಜೆಟ್‌ನಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಕೇವಲ ರೂ. 26,469 ಕೋಟಿ ತೆಗೆದಿರಿಸಲ ಬಜೆಟ್‌ನ ಪ್ರತಿಶತ 0.5ರಷ್ಟು ಮತ್ತು ಜಿಡಿಪಿಯ ಪ್ರತಿಶತ 0.6ರಷ್ಟು ವಾಸ್ತವವಾಗಿ ಕೃಷಿ ಉತ್ಪನ್ನ ಖರೀದಿ ಶೇ.4.2ರಷ್ಟು ತೆಗೆದಿರಿಸಬೇಕಾಗಿತ್ತು. ಆದರೆ, ರೈತ ವರ್ಗದ ವಿರುದ್ಧವಾಗಿರುವ ಕಾರ್ಪೋರೇಟ್ ಕೇಂದ್ರದ ಮೋದಿ ಸರ್ಕಾರ ಹಣಕಾಸು ಹೊರೆಯೆಂದು ಹೇಳುತ್ತಿದೆ. ರೈತರ ಸಾಲ ಮನ್ನಾ ಮಾಡಿದರೆ ಆತಿ ಹೊರೆಯಾಗುತ್ತದೆ ಎಂದು ಹೇಳುವ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ” ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊಪ್ಪಳ | ಕೈಗಾರಿಕಾ ತ್ಯಾಜ್ಯದಿಂದ ಪರಿಸರ ಮಾಲಿನ್ಯ; ಕಲ್ಯಾಣಿ ಸ್ಟೀಲ್ ಕಂಪನಿ ವಿರುದ್ಧ ಆಕ್ರೋಶ

ಮುದುಕಪ್ಪ ಎಂ.ಹೊಸಮನಿ, ಯಲ್ಲಪ್ಪ ಸಿದ್ದರು ಶಿವಪೂರ, ಪರಶುರಾಮ್ ಪೂಜಾರ ನರೇಗಲ್, ರೇಣುಕಮ್ಮ ಅಚಲಾಪುರ, ಆಂಜನೇಯ ಬಂಡಿಹರ್ಲಾಪುರ ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X