“ಹೆಚ್ಚಿನ ಆಸಕ್ತಿ, ಓದು, ಅರಿವು, ಅನುಭವಗಳು ಸಾಹಿತ್ಯ ರಚನೆಗೆ ದಾರಿ ಆಗುತ್ತವೆ” ಎಂದು ಕತೆಗಾರ ಡಾ. ಟಿ. ಎಸ್ ಗೊರವರ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಮುಳಗುಂದದ ಆರ್.ಎನ್.ಡಿ. ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ಸಾಹಿತ್ಯದ ಓದು ಮತ್ತು ಬರೆಹ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಪತ್ರಕರ್ತ ಶಿವಕುಮಾರ ಕುಷ್ಟಗಿ ಮಾತನಾಡಿ, “ಜನರ ಅಭಿರುಚಿಗೆ ತಕ್ಕಂತೆ ಪತ್ರಕರ್ತರು ತಮ್ಮ ವರದಿಗಾರಿಕೆಯಲ್ಲಿ ಬಳಸುವ ಪದಗಳು ಬಳಸಲ್ಪಡುತ್ತವೆ. ಅಲ್ಲದೇ ತಂತ್ರಜ್ಞಾನವು ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ಅದನ್ನು ಬಳಸುವ ರೀತಿ ನಮ್ಮ ಮೇಲಿದೆ” ಎಂದು ವಿದ್ಯಾರ್ಥಿಗಳಿಗೆ ತಿಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರು ಡಾ. ಆರ್. ಎಂ. ಕಲ್ಲನಗೌಡರವರು ಸಾಹಿತ್ಯ ರಚನೆ ಹಾಗೂ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಮೂಲಭೂತವಾಗಿ ಹೊಂದಬೇಕಾದ ಕೌಶಲ್ಯಗಳ ಕುರಿತಂತೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅಂತರಾಷ್ಟ್ರೀಯ ಷಡ್ಯಂತ್ರಕ್ಕೆ ಬಲಿಯಾಗದೇ ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕಿದೆ : ಶಾಸಕ ಶ್ರೀನಿವಾಸ ಮಾನೆ
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಶಿವಪ್ಪ ಎಸ್ ಮುದಿಯಜ್ಜನವರ, ಐ.ಕ್ಯೂ.ಎ.ಸಿ ವಿಭಾಗದ ಸಂಯೋಜಕರು ನಾಗರಾಜ ಎ, ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರು ಡಾ. ಪರಸಪ್ಪ ಬಾರಕೇರ, ಎಂ ಕೆ ಕಡೆಮನಿ ಕೆ ಎಂ ಶಿರೂರು, ವಾಣಿಜ್ಯ ವಿಭಾಗದ ಮುಖ್ಯಸ್ಥರು ಶ್ರೀಮತಿ ಅನುಪಮಾ, ಕಾಲೇಜಿನ ಇತರೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
