“ಸತ್ಯ, ಅಹಿಂಸೆ, ಕ್ಷಮೆ ಮುಂತಾದ ಮಾನವೀಯ ಮೌಲ್ಯಗಳ ನೆಲೆಯಲ್ಲಿ ಧಾರ್ಮಿಕ ಚಿಂತನೆಗಳನ್ನು ಪ್ರಚುರಪಡಿಸಿ ಪ್ರೀತಿಯ ಮೂಲಕ ವಿಶ್ವವನ್ನೇ ಗೆದ್ದ ದಿವ್ಯಪುರುಷ ಭಗವಾನ್ ಮಹಾವೀರರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಆದರಣೀಯ” ಎಂದು ಶಂಕ್ರಪ್ಪ ಜಯಪ್ಪ ದುಂಡನ್ನವರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಬಾಳಂಬೀಡ ಗ್ರಾಮದಲ್ಲಿ ಜೈನ ಸಮಾಜದಿಂದ ಮೆರವಣಿಗೆ ಮೂಲಕ ಭಗವಾನ್ ಮಹಾವೀರ ಜಯಂತಿ ಆಚರಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
“ಮಹಾವೀರರ ಚಿಂತನೆಗಳು ಭಾಷಣಗಳಿಗೆ ಸೀಮಿತವಾಗದೇ ಬದುಕಿನ ಭಾಗವಾಗಬೇಕಿದೆ. ವಿಶ್ವಪ್ರೇಮ ಭ್ರಾತೃತ್ವ ಸಮಾಜವನ್ನು ಬೆಸೆಯಬೇಕಿದೆ. ಯುದ್ಧ ಮಾಡದೇ ಜಗತ್ತನ್ನು ಹೇಗೆ ಗೆಲ್ಲಬಹುದು ಎಂಬುದ ನ್ನು ತೋರಿಸಿಕೊಟ್ಟ ಮಹಾವೀರ ಶಾಂತಿ, ಅಹಿಂಸೆ ಮತ್ತು ಸಮಾನತೆಯ ಮಂತ್ರವನ್ನು ನಾವೆಲ್ಲರೂ ಪಾಲಿಸುವ ಸಂಕಲ್ಪ ಗೈಯೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | 42ನೇ ವಯಸ್ಸಿನಲ್ಲಿ ಮಗಳೊಂದಿಗೆ ಪಿಯು ಪರೀಕ್ಷೆ ಬರೆದು ಪಾಸಾದ ತಾಯಿ
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಶ್ರೀಕಾಂತಪ್ಪ ದುಂಡಣ್ಣವರ, ಚಂದ್ರಪ್ಪ ಭದ್ರಾಪುರ್, ನಾಗಪ್ಪ ದುಂಡಣ್ಣವರ್, ರಾಜೇಂದ್ರ ಜಿನ್ನಣ್ಣನವರ್, ಮಂಜಪ್ಪ, ಪ್ರಕಾಶಪ್ಪ ದುಂಡಣ್ಣನವರ್, ದೇವರಾಜ್ ನಿಂಗಪ್ಪ ದುಂಡಣ್ಣವರ್, ಅಪ್ಪಣ್ಣ ಕಳಸೂರು, ಜಯಪ್ಪ, ಆನಂತಪ್ಪ ರಾಮಣ್ಣ ದುಂಡಣ್ಣವರ್, ನಾಗರಾಜ ಬೊಮ್ಮಣ್ಣವರ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.
