ಉಡುಪಿ | ಚಿತ್ರದಲ್ಲಿ ಮೂಡಿಬಂದ ಭೀಮ್ ರಾವ್, ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

Date:

Advertisements

ಬೋಧಿಸತ್ವ ಬುದ್ಧ ಫೌಂಡೇಶನ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ. ಇವರ ಜಂಟಿ ‌ಸಹಯೋಗದಲ್ಲಿ ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಕುರಿತ ಸ್ಪರ್ಧೆಗಳು ಹಾವಂಜೆಯ ಮಂಜುನಾಥ ಸಭಾಭವನದಲ್ಲಿ ನಡೆಯಿತು.

ಬ್ರಹ್ಮಾವರ ತಾಲೂಕು ಶಿಕ್ಷಣ ಸಂಯೋಜಕರಾದ ಪ್ರಕಾಶ ಬಿ ಬಿ ರವರು ಪ್ರಾಸ್ತಾವಿಕ ಮಾತನಾಡುವ ಮೂಲಕ ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ‌ಸಂಕ್ಷಿಪ್ತವಾಗಿ ತಿಳಿಸಿದರು.

1004995357

ಉಪಾಸಕ, ಚೇತನ ಪ್ರೌಢಶಾಲೆ ಹಂಗಾರಕಟ್ಟೆಯ ಕನ್ನಡ ಅಧ್ಯಾಪಕರಾದ ಎಂ ಪಕೀರಪ್ಪ ಮಾತನಾಡಿ ಇಂದಿನ ಮಕ್ಕಳು ಮಾದ್ಯಮಗಳಿಂದ ಮತ್ತು ಅಂತರ್ ಜಾಲಗಳಿಂದ ಯಾರನ್ನು ಆದರ್ಶ ವ್ಯಕ್ತಿಗಳಾಗಿ ಕಾಣಬೇಕು..? ಮನುಕುಲಕ್ಕೆ ಮಾನವ ಪ್ರೀತಿ, ಶಾಂತಿಯನ್ನು ಸಾರಿದ ಸಾಮಾಜಿಕ ವಿಜ್ಞಾನಿ ಗುರು ಗೌತಮ ಬುದ್ಧ ಮತ್ತು ಸಮಸಮಾಜ ಮತ್ತು ಸೌಹಾರ್ದತೆಯ ಆಶಯಗಳನ್ನು ನೀಡಿದ ಡಾ. ಬಿ ಆರ್ ಅಂಬೇಡ್ಕರ್ ರವರನ್ನು ಆದರ್ಶ ವ್ಯಕ್ತಿಗಳಾಗಿ ಕಾಣುವ-ಅನುಸರಿಸುವ ತುರ್ತು ಅಗತ್ಯವಿದೆ. ಕರಾವಳಿಯಲ್ಲಿ ದಮ್ಮದ ಬೆಳಕನ್ನು ಚೆಲ್ಲುವ ಕಾರ್ಯವನ್ನು ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಹಾವಂಜೆ ಮಾಡುತ್ತಾ ಸಾಗಿದೆ. ಮೈತ್ರಿಬಪೂರ್ಣ ಮಾನವೀಯ ಮೌಲ್ಯಗಳನ್ನು ಮಕ್ಕಳು ಮೈಗೂಡಿಸಿಕೊಂಡಾಗ ಬುದ್ಧ ಭಾರತ- ಪ್ರಬುದ್ಧ ಭಾರತ ನಿರ್ಮಾಣ ಸಾದ್ಯ” ಎಂದು ಹೇಳಿದರು.

Advertisements
1004995352

ಡಾ. ಬಾಬಾ ಸಾಹೇಬ್ ಅವರ ವಿಚಾರಗಳನ್ನು ಬುದ್ಧರ ದಮ್ಮವನ್ನು ಮಾನವ ಬಂಧುತ್ವವನ್ನು ಮನೆ ಮನಗಳಿಗೆ ಪಸರಿಸುವ ಕಾರ್ಯವನ್ಙು ಬೋಧಿಸತ್ವ ಬುದ್ಧ ಫೌಂಡೇಶನ್ ನ ಬುದ್ಧ ವಿಹಾರ ಹಾವಂಜೆ ನಡೆಸುತ್ತದೆ ಎಂದು ಬೋಧಿಸತ್ವ ಬುದ್ಧ ಪೌಂಡೇಷನ್ ಅಧ್ಯಕ್ಷರಾದ ಆಯುಷ್ಮಾನ್ ಶೇಖರ್ ಹಾವಂಜೆ ಹೇಳಿದರು.

ಉಡುಪಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ ಅವರು ದ್ಯಾನ ಮತ್ತು ಮೈತ್ರಿ ಧ್ಯಾನ ಮಕ್ಕಳ ಮನಸನ್ನು ಶುಚಿಗೊಳಿಸುತ್ತದೆ ಅಳವಡಿಸಿಕೊಳ್ಳಲು ಕರೆ ನೀಡಿದರು. ವಿಚಾರವಂತರು ಚಿಂತಕರು. ಹೆಚ್ ಜಿ ಸೋಮಪ್ಪ ಕೆ, ಕದಸಂಸ ಭೀಮವಾದ ಜಿಲ್ಲಾ ಸಂಚಾಲಕ ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ECO ನಾಗಾರ್ಜುನ್, CRP ಶಾಂತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೌದ್ಧ ಚಿಂತಕರು, ವಿಚಾರವಂತರು ಸೋಮಪ್ಪ ಹೆಚ್ ಜಿ ತಮ್ಮ ಸ್ವಾಗತ ಭಾಷಣದಲ್ಲಿ ಸರ್ವರಿಗೂ ಮೈತ್ರಿಪೂರ್ಣ ಸ್ವಾಗತ ಕೋರಿದರು. ಪ್ರಶಾಂತ ಶೆಟ್ಟಿ ಹಾವಂಜೆ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಉಪಾಸಕಿ ಜಯಶೀಲ ಬಿ ರೋಟೆ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸ್ಪರ್ಧಾ ಕಾರ್ಯಕ್ರಮ ಮುಕ್ತಾಯಗೊಂಡಿತು.

1004995351

150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಟ್ರಸ್ಟ್ ನ ವಿಹಾರದ, ಸಂಘಟನೆಯ ಹಾಗೂ BSI ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕಾರ್ಯಕರ್ತರು,ಉಪಾಸಕ ಉಪಾಸಿಕರು ಮತ್ತು ಅನೇಕ ಶಿಕ್ಷಕ, ಶಿಕ್ಷಕಿಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X