ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ ಕೆರೆಯಲ್ಲಿ ಹಲವು ದಿನಗಳಿಂದ ಪ್ರತಿದಿನವೂ ಸಾವಿರಾರು ಮೀನುಗಳು ಸಾವನ್ನಪ್ಪಿ ದಡ ಸೇರುತ್ತಿವೆ. ಮೀನುಗಳ ಸಾವಿಗೆ ನಿಖರ ಕಾರಣ ಮಾತ್ರ ನಿಗೂಢವಾಗಿದೆ.
ತಮಗಾಗದವರು ಯಾರೋ.. ಕೆರೆಯಲ್ಲಿ ವಿಷ ಮಿಶ್ರಣ ಮಾಡಿರುವ ಸಾಧ್ಯತೆ ಇದೆ. ಹಾಗಾಗಿ ಮೀನುಗಳು ಸಾಯುತ್ತಿವೆ ಎಂದು ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗುತ್ತಿಗೆ ಪಡೆದವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಮೀನುಗಾರಿಕೆ ಗುತ್ತಿಗೆದಾರ ರಮೇಶ ಭೋವಿ, “ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಬೆಲೆಯ ಮೀನುಗಳು ಸಾವನ್ನಪ್ಪಿವೆ. ಕಿಡಿಗೇಡಿಗಳು ಯಾರೋ ಕರೆಯಲ್ಲಿ ವಿಷ ಬೆರೆಸಿದ್ದಾರೆ. ಕೂಡಲೇ ಈ ಕುರಿತು ತನಿಖೆ ಅಗತ್ಯವಿದೆ. ಕಳೆದ ವರ್ಷವೂ ಇದೇ ರೀತಿ ನಷ್ಟ ಅನುಭವಿಸಿದ್ದೇನೆ. ಈ ವರ್ಷವೂ ಕೆರೆಗೆ ವಿಷ ಹಾಕಿ ಮೀನುಗಳನ್ನು ಸಾಯಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳು ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು” ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಜಯನಗರ | ಪ್ರಕಟಿತ ಪುಸ್ತಕಗಳ ಬೆಳಕಿಗೆ ತರುವ ಕೆಲಸವಾಗಬೇಕು: ಶಾಸಕ ಎಚ್ ಆರ್ ಗವಿಯಪ್ಪ