ನಿನ್ನೆ ಮಧ್ಯಾಹ್ನ ಕೊಪ್ಪಳ ಹಾಗೂ ಸುತ್ತಲಿನ ತಾಲೂಕುಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಸಿಡಲು ಬಡಿದು ಇಬ್ಬರು ರೈತರು ಸಾವನ್ನಿಪ್ಪಿದ್ದಾರೆ.
ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಮೃತ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
‘ಹೊಲಕ್ಕೆ ಹೋದವರು ಇನ್ನೂ ಬಂದಿಲ್ಲ’ ಎಂದು ಆತಂಕ ಪಟ್ಟು ತೋಟಕ್ಕೆ ಹೋಗಿ ನೋಡಲಾಗಿ.. ಇಬ್ಬರು ಸಾವನಪ್ಪಿದ್ದರು’ ಎಂದು ಪ್ರತ್ಯಕ್ಷದರ್ಶಿ ಬಸವರಾಜ್ ಹಕಾರ್ ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಕಾಲುವೆ ನೀರಿನ ಸಮರ್ಪಕ ಬಳಕೆಗೆ ಕ್ರಮವಹಿಸಿ: ಸುಂದರೇಶ ಬಾಬು
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ತಹಶೀಲ್ದಾರರು ಭೇಟಿ ನೀಡಿ ಮುಂದಿನ ಕ್ರಮಕ್ಕೆ ಅದೇಶಿಸಿದ್ದಾರೆ.