ಸಾಮಾಜಿಕವಾಗಿ ಎದುರಾಗುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಮತ್ತು ಪ್ರಶ್ನೆ ಮಾಡಲು ಪ್ರತಿಯೊಬ್ಬರು ಸಹ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಬಾಬು ಜಗಜೀವನ್ ರಾಮ್ ಆದಿಜಾಂಭವ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಾಬು ಣ್ಣ ರಾಮ್ ಸಮುದಾಯ ಭವನದಲ್ಲಿ ಬಾಬು ಜಗಜೀವನ್ ಆದಿ ಜಾಂಬವ ಯುವ ಬ್ರಿಗೇಡ್ ಸಂಘಟನೆ ವತಿಙಯಿಂದ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ ರವರ 118 ನೇ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಬಾಸಾಹೇಬ್ ಹಾಗೂ ಬಾಬೂಜಿ ಮುಂದೆ ನಾಣ್ಯದ ಎರಡು ಮುಖಗಳಾಗಿದ್ದು ಸಮಾಜದಲ್ಲಿ ಆಚರಣೆಯಲ್ಲಿದ ಜಾತಿ ವ್ಯವಸ್ಥೆ ಅಸ್ಪೃಶ್ಯತೆಯನ್ನ ಹೋಗಲಾಡಿಸಲು ತಮ್ಮದೇ ಮಾರ್ಗಗಳನ್ನು ಅನುಸರಿಸಿದವರು ಎಂದರು.
ರಾಜಕೀಯವಾಗಿ ಸುಮಾರು 30 ವರ್ಷಗಳ ಸುದೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಬಾಬು ಜಗಜೀವನ್ ರಾಮ್ ಅವರು ಕಾರ್ಮಿಕರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದರು. ರೈತರ ಬದುಕಿಗೆ ಹಸಿರು ಕ್ರಾಂತಿಯಂತಹ ದಿಟ್ಟ ನಿರ್ಧಾರವನ್ನು ಕೈಗೊಂಡು ರೈತರ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಜಿ.ಎಚ್.ಬಸವರಾಜ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವ ರತ್ನ ಎಂಬುದಾಗಿ ಇಡೀ ವಿಶ್ವವೇ ಅವರನ್ನು ನೆನಪಿಸಿಕೊಳ್ಳುತ್ತಿದೆ. ಅವರು ಬರೆದಂತಹ ಸಂವಿಧಾನದಿಂದ ಇಂದು ದೇಶ ಸುಭದ್ರ ಸ್ಥಿತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಒಬ್ಬರಿಗೆ ಒಂದು ಮತ ಎಂಬ ಸಮಾನತೆಯಿಂದಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಸಹ ಅಧಿಕಾರವನ್ನು ಪಡೆಯುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ದೇಶಕ್ಕೆ ನೀಡಿದವರು. ಕೇಂದ್ರದಲ್ಲಿ ವಿಪಿ ಸಿಂಗ್ ಅವರ ಸರ್ಕಾರ ಇದ್ದಾಗ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದರು.
ಆದಿ ಜಂಬವ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಕೆಂಪರಾಜ್ ಮೌರ್ಯ ಮಾತನಾಡಿ, ದಲಿತ ಸಮುದಾಯದ ಇಂದಿನ ಯುವ ಪೀಳಿಗೆಯು ಶಿಕ್ಷಣದ ದೂರ ಉಳಿಯುತ್ತಿದ್ದು ಬೇರೆ ಸಮುದಾಯದ ಯುವಕರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ನಿಲಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಆತಂಕ ತರಿಸುವಂತ್ತಾಗಿದೆ. ಸಮುದಾಯದಲ್ಲಿ ಶಿಕ್ಷಣ ವಂಚಿತ ಮಕ್ಕಳನ್ನ ಗುರುತಿಸಿ ಅಂತವರಿಗೆ ಶಿಕ್ಷಣ ಮುಂದುವರೆಸುವುದಕ್ಕೆ ಸಹಾಯ ಹಸ್ತ ಚಾಚಬೇಕಿದೆ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹಾಗೂ ಹೋರಾಟ ಮೂರು ಮಂತ್ರಗಳಲ್ಲಿ ಶಿಕ್ಷಣ ಬಿಟ್ಟು ಸಂಘಟನೆ ಹಾಗೂ ಹೋರಾಟಗಳನ್ನು ಮಾಡುತ್ತಿರುವುದು. ಆಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣಕ್ಕೆ ಮಹತ್ವದ ಸ್ಥಾನವಿರುವುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಎನ್.ಎಂ.ಎಸ್ ಪರೀಕ್ಷೆಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳಮ್ಮ, ಸುಮ, ಶಿವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಹೊಸಕೆರೆ ಬಸವರಾಜು, ಲೋಕೇಶ್ ದೊಡ್ಡಗುಣಿ ಕೀರ್ತಿ, ಹಿರಿಯ ಪತ್ರಕರ್ತ ಗಂಗಾಧರ ಸ್ವಾಮಿ, ನರಸಿಂಹಮೂರ್ತಿ, ದಲಿತ್ ಗಂಗಣ್ಣ, ಪಾಂಡುರಂಗಪ್ಪ, ಎನ್ಎ ನಾಗರಾಜು, ಜಗನ್ನಾಥ್, ರೇಖಾ, ರೇಣುಕಾ, ಹುಚ್ಚಪ್ಪ ಸೇರಿದಂತೆ ಇತರರರು ಇದ್ದರು.