ಮನೆಯ ಕೆಲಸ ಮಾಡುವಂತೆ ತಾಯಿ ಬೈಯ್ದು ಬುದ್ಧಿವಾದ ಹೇಳಿದ್ದಕ್ಕೆ ಮಗಳು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಅಂಬೇಡ್ಕರ್ ಆಶ್ರಯ ಕಾಲೊನಿಯಲ್ಲಿ ನಡೆದಿದೆ.
ಪುತಳಾಬಾಯಿ ಸಂತೋಷ ಕಟ್ಟಿಮನಿ (18) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದು ಬಂದಿದೆ.
ನನ್ನ ಮಗಳು ಪುತಳಾಬಾಯಿಗೆ ಮನೆಯಲ್ಲಿ ಮನೆಯ ಕೆಲಸ ಮಾಡುವಂತೆ ಬುದ್ಧಿ ಮಾತು ಹೇಳಿ ಬೈದಿದ್ದೆ. ನಂತರ ನಾನು ಹೊರಗೆ ಹೋಗಿದ್ದೆ. ನಾನು ಬೈದ ವಿಷಯವನ್ನೇ ಮನಸ್ಸಿಗೆ ತೆಗೆದುಕೊಂಡು, ಕೋಪದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಮೃತ ಯುವತಿಯ ತಾಯಿ ವಿಜಯಲಕ್ಷ್ಮಿ ಸಂತೋಷ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.