ಶುಕ್ರವಾರ ದೆಹಲಿಯಲ್ಲಿ ತೀವ್ರವಾದ ಧೂಳಿನ ಬಿರುಗಾಳಿ ಉಂಟಾದ ಕಾರಣದಿಂದಾಗಿ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದೆ. ಕನಿಷ್ಠ 205 ವಿಮಾನಗಳು ವಿಳಂಬವಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ಕನಿಷ್ಠ 50 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಸರಾಸರಿ ಒಂದು ಗಂಟೆಗಳ ಕಾಲ ನಿರ್ಗಮನ ವಿಳಂಬವಾಗಿದೆ ಎನ್ನಲಾಗಿದೆ.
“ಧೂಳಿನ ಬಿರುಗಾಳಿಯ ನಂತರ, ಅನೇಕ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ರದ್ದುಗೊಳಿಸಲಾಗಿದೆ. ಇದರಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ಬೇರೆಡೆಗೆ ಮಾರ್ಗ ಬದಲಾಯಿಸಿಕೊಂಡ ವಿಮಾನಗಳು ದೆಹಲಿಗೆ ತಲುಪುವುದು ತಡವಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ” ಎಂದು ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ| ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ: 7 ಮಂದಿ ಸಾವು; ಆರೆಂಜ್ ಅಲರ್ಟ್ ಘೋಷಣೆ
ಏರ್ ಇಂಡಿಯಾ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ಆದರೆ ನಿರಾಶೆಗೊಂಡ ಪ್ರಯಾಣಿಕರು ತಮ್ಮ ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. “ಶ್ರೀನಗರದಿಂದ ದೆಹಲಿಗೆ ಮುಂಬೈಗೆ ಸಂಜೆ 4 ಗಂಟೆಗೆ ವಿಮಾನವಿತ್ತು. ನಮ್ಮ ವಿಮಾನವು ಸಂಜೆ 6 ಗಂಟೆಯ ಸುಮಾರಿಗೆ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಧೂಳಿನ ಬಿರುಗಾಳಿಯಿಂದಾಗಿ ಚಂಡೀಗಢಕ್ಕೆ ಮಾರ್ಗ ಬದಲಾಯಿಸಲಾಗಿದೆ. ಅದಾದ ನಂತರ ರಾತ್ರಿ 11 ಗಂಟೆಗೆ ದೆಹಲಿಗೆ ತಲುಪಿದೆ” ಎಂದು ಏರ್ ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
“ನಂತರ ನಮ್ಮನ್ನು ದೆಹಲಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಮುಂಬೈಗೆ ತೆರಳುವ ಮತ್ತೊಂದು ವಿಮಾನ ಹತ್ತುವಂತೆ ತಿಳಿಸಲಾಗಿದೆ. ನಾವು ಸುಮಾರು 4 ಗಂಟೆಗಳ ಕಾಲ ವಿಮಾನದಲ್ಲಿ ಕುಳಿತುಕೊಂಡೆವು. ನಂತರ ಮತ್ತೆ ಇಳಿಯಲು ತಿಳಿಸಲಾಯಿತು. ಮತ್ತೆ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು. ಈಗ ಬೆಳಿಗ್ಗೆ 8 ಗಂಟೆ ನಾವು ಇನ್ನೂ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದೇವೆ. ನಮ್ಮ ವಿಮಾನ ಇನ್ನೂ ಟೇಕ್ ಆಫ್ ಆಗಿಲ್ಲ” ಎಂದು ಸಿಲುಕಿಕೊಂಡ ಪ್ರಯಾಣಿಕರು ಹೇಳಿದ್ದಾರೆ.
@airindia @MoCA_GoI @JM_Scindia Most mismanaged, misinformed world class international airport, New Delhi.#INDIRAGandhi.. worse than Bus Stand . pic.twitter.com/uDQilWIfxq
— Ärvind Lal (@lalarvi) April 12, 2025
ಇನ್ನು ಕೆಲವರು ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಿರ್ವಹಣೆ, ಮಾಹಿತಿ ನೀಡುವ ವಿಚಾರದಲ್ಲಿ ವಿಶ್ವ ದರ್ಜೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ನವದೆಹಲಿ ಬಸ್ ನಿಲ್ದಾಣಕ್ಕಿಂತ ಕೆಟ್ಟದಾಗಿದೆ” ಎಂದು ತಿಳಿಸಿದ್ದಾರೆ.
“ಕೋಲ್ಕತ್ತಾದಿಂದ ದೆಹಲಿಗೆ ಇಂಡಿಗೋ ವಿಮಾನವನ್ನು ಸಂಜೆಯಿಂದ 6 ಬಾರಿ ಮರು ನಿಗದಿಪಡಿಸಲಾಗಿದೆ. ಇಂಡಿಯಾಗೋ ಪ್ರಯಾಣಿಕರನ್ನು ಹಗುರವಾಗಿ ಪರಿಗಣಿಸುತ್ತಿದ್ದೀರಾ? ನಿಮ್ಮಿಂದಾಗಿ ಈಗಾಗಲೇ ಆರು ಗಂಟೆ ನಷ್ಟವಾಗಿದೆ” ಎಂದಿದ್ದಾರೆ.
