ಜಗತ್ತು ದೇವನ ಕುಟುಂಬವಾಗಿದೆ. ಮದುವೆ, ಕುಟುಂಬ ಎಂಬುದು ಆಧ್ಯಾತ್ಮಿಕವಾಗಿ ರೂಪಿಸಲ್ಪಟ್ಟಿರುವ ನೈಸರ್ಗಿಕ ವ್ಯವಸ್ಥೆಯಾಗಿದೆ. ಅದನ್ನು ಹಾಳುಗೆಡವಿದ ಮನೆ ಪಿಶಾಚಿಯ ಮನೆಯಾಗಿ ಮಾರ್ಪಡುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಇ್ ಅವರು “ಸ್ಟ್ರಾಂಗ್ ಫ್ಯಾಮಿಲಿ, ಸ್ಟ್ರಾಂಗ್ ಸೊಸೈಟಿ” ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ಉಡುಪಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಮದರ್ ಆಫ್ ಸಾರೋಸ್ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ಫಸ್ಟ್ ಗ್ರೇಡ್ ಕಾಲೇಜ್ ಸ್ನಾತಕೋತ್ತರ ವಿಭಾಗದ ಪ್ರೊಫೆಸರ್, ಕಲಾವಿಭಾಗದ ಡೀನ್ ಆಗಿರುವ ಡಾ. ನಿಕೇತನ, ಜಿಲ್ಲಾಸ್ಪತ್ರೆ ರಕ್ತ ನಿಧಿ ಮತ್ತು ಲ್ಯಾಬ್‌ನ ಇನ್‌ಚಾರ್ಜ್ ಡಾ. ವೀಣಾ ಕುಮಾರಿ, ಉಡುಪಿ ಡಯಾಸಿಸ್ ಎಕ್ಯೂಮಿಸಮ್‌ನ ಡೈರೆಕ್ಟರ್ ಮತ್ತು ಉಡುಪಿ ಶೋಕಮಾತಾ ಇಗರ್ಜೆಯ ಮುಖ್ಯ ಸಹಾಯಕ ಗುರುಗಳು, ಫಾ. ಲಿಯೋ ಪ್ರವೀಣ್ ಡಿ’ಸೋಜಾ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಜಮಾಅತ್‌ನ ಸ್ಥಾನೀಯ ಅಧ್ಯಕ್ಷ ನಿಸಾರ್ ಅಹಮದ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್ ಧನ್ಯವಾದವಿತ್ತರು.