ಬೆಂಗಳೂರು ನಗರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ದಲಿತ ಸಾಹಿತ ಪರಿಷತ್ತು ಈ ಸಮ್ಮೇಳನವನ್ನು ಬೆಂಗಳೂರು ನಗರದಲ್ಲಿ ಏಪ್ರಿಲ್ 22ರಂದು ಹಮ್ಮಿಕೊಂಡಿದೆ.
ನಗರದ ಜೆಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಳಿಗ್ಗೆ 8:30ರಿಂದ ಸಮ್ಮೇಳನ ನಡೆಯಲಿದೆ. ಆರಂಭದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಇದಕ್ಕೆ ಜಾನಪದ ವಿದ್ವಾಂಸ ಬಾನಂದೂರು ಕೆಂಪಯ್ಯ ಅವರು ಚಾಲನೆ ನೀಡಲಿದ್ದಾರೆ.
ಇದನ್ನು ಓದಿದ್ದೀರಾ? ಗಂಗಾವತಿ | ಸಾಹಿತ್ಯ ಸಮ್ಮೇಳನವೋ, ಸನ್ಮಾನ ಸಮ್ಮೇಳನವೋ ಅಥವಾ ಧಾರ್ಮಿಕ ಸಮ್ಮೇಳನವೋ ?
ಸಮ್ಮೇಳನದ ಉದ್ಘಾಟನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆಯಲಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ.
ದಲಿತ ಸಮ್ಮೇಳನದಲ್ಲಿ ಒಟ್ಟಾಗಿ ಮೂರು ವಿಚಾರಗೋಷ್ಠಿಗಳು ನಡೆಯಲಿದೆ. ಜೊತೆಗೆ ಒಂದು ಕವಿಗೋಷ್ಠಿಯೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗೌಡಗೆರೆ ಮಾಯುಶ್ರೀ ಪ್ರಕಟಣೆಯಲ್ಲು ತಿಳಿಸಿದ್ದಾರೆ.
ಚಿತ್ರ ಕೃಪೆ: ಗೌತಮ್ ಅವರ್ತಿ