ಈ ದಿನ ಡಾಟ್ ಕಾಮ್ ಹೊರತಂದಿರುವ ʼಅರಿವೇ ಅಂಬೇಡ್ಕರʼ ವಿಶೇಷ ಸಂಚಿಕೆಯನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ ಬಿಡುಗಡೆಗೊಳಿಸಿದರು.
ವಿಜಯಪುರದಲ್ಲಿ ನಡೆಯುತ್ತಿರುವ ʼಅಂಬೇಡ್ಕರ್ ಹಬ್ಬʼ ಕಾರ್ಯಕ್ರಮದ ಮೂರನೇ ದಿನವಾದ ಇಂದು ಬಿಡುಗಡೆಗೊಳಿಸಲಾಗಿರುವ ಈ ವಿಶೇಷ ಸಂಚಿಕೆಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹತ್ವದ ಕೃತಿಗಳ ಸಾರ ಸಂಗ್ರಹವಾಗಿದೆ.
ಕಾರ್ಯಕ್ರಮದಲ್ಲಿ ಈ ದಿನ ಮುಖ್ಯಸ್ಥ ವಾಸು ಎಚ್ ವಿ, ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಬಿ ಸಿ ಬಸವರಾಜು, ರಾಷ್ಟ್ರೀಯ ಬಸವದಳದ ವಿಜಯಪುರ ಅಧ್ಯಕ್ಷ ಡಾ. ರವಿ ಬಿರಾದಾರ, ಜಾಗೃತ ಕರ್ನಾಟಕದ ಮುತ್ತುರಾಜ, ರಾಜಶೇಖರ ಅಕ್ಕಿ, ಸೀತಾ ಲಕ್ಷ್ಮಿ, ಮೋಹನ ಕುಮಾರ, ಸಿ ಜಿ ಪಾಟೀಲ, ಸೈಯದ್ ಎಚ್ಎಫ್ ಇನಾಮದಾರ, ಒಡಲದನಿ ಮಹಿಳಾ ಒಕ್ಕೂಟ ಜಿಲ್ಲಾ ನಾಯಕಿ ಭುವನೇಶ್ವರಿ ಕಾಂಬಳೆ, ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ, ಜೆ ಎಸ್ ಪಾಟೀಲ ಹಾಗೂ ಚೆನ್ನ ಕಟ್ಟುಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ