ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಒಂದು ರೀತಿಯ ನಿಶಬ್ದ ಯುದ್ಧವಾಗಿದೆ. ಕಣ್ಣಿಗೆ ಕಾಣದೆ ನಾಲ್ಕು ಗೋಡೆಯ ನಡುವೆ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಾದ ಹೆಣ್ಣು ಭ್ರೂಣಹತ್ಯೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಹಿಂಸೆ ಮುಂತಾದವುಗಳಿಗೆ ಪುರಾವೆ ಒದಗಿಸುವುದು ಕಷ್ಟ ಹಾಗೂ ಪುರಾವೆಗಳನ್ನು ಇಟ್ಟುಕೊಳ್ಳುವಷ್ಟು ಮಹಿಳೆಯರು ಅವಕಾಶವನ್ನು ಹೊಂದಿರುವುದಿಲ್ಲ. ಕುಟುಂಬದೊಳಗಿನ ಈ ಹಿಂಸೆಗಳಿಗೆ ಪುರುಷರಷ್ಟೇ ಕಾರಣವಲ್ಲ. ಪಿತೃಪ್ರಧಾನತೆಯನ್ನು ನಂಬಿ ನಡೆಯುವ ಮಹಿಳೆಯರೂ ಇದರೊಂದಿಗೆ ಕೈ ಜೋಡಿಸುತ್ತಾರೆ. ಪಿತೃಪ್ರಧಾನತೆಯು ಆಯ್ಕೆ, ನಿರ್ಧಾರ ಮತ್ತು ನಿರ್ವಹಿಸುವ ಹಕ್ಕಿನ ಮೇಲೆ ತನ್ನ ಅಧಿಕಾರವನ್ನು…

ಪ್ರೊ. ಆರ್. ಸುನಂದಮ್ಮ
ಪ್ರೊ. ಆರ್. ಸುನಂದಮ್ಮ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ದುಡಿದವರು. ಅದೇ ವಿವಿಯ ಹಣಕಾಸು ಅಧಿಕಾರಿಯಾಗಿ ಮತ್ತು ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ, ಜಾನಪದ, ಮಹಿಳಾ ಅಧ್ಯಯನ ಅವರ ತಜ್ಞತೆಯ ಕ್ಷೇತ್ರಗಳು. ಸಂಶೋಧಕಿ, ಕವಯಿತ್ರಿ, ಕಾದಂಬರಿಗಾರ್ತಿ ಮತ್ತು ಅಂಕಣಗಾರರಾಗಿ ಅವರು ಪರಿಚಿತರು. ಮಹಿಳಾ ಚಳವಳಿಗಳ ಜೊತೆ ಸದಾ ಗುರುತಿಸಿಕೊಂಡವರು. ‘ಧ್ವಿತ್ವ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಭರತ ಕಲ್ಪ ಕಾದಂಬರಿಗೆ ದ್ವಾರನಕುಂಟೆ ಪಾತಣ್ಣ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ರಾಜ್ಯ ಸರ್ಕಾರದ ಅಕ್ಕಮಹಾದೇವಿ ಪ್ರಶಸ್ತಿ ದೊರೆತಿವೆ.