ವಿಜಯಪುರ | ಸಾಂಸ್ಕೃತಿಕ ಜನೋತ್ಸವ: ‘ದೇವರ ನಾಡಲ್ಲಿ’ ಚಿತ್ರ ಪ್ರದರ್ಶನ

Date:

Advertisements

ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ 14ನೇ ʼಸಾಂಸ್ಕೃತಿಕ ಜನೋತ್ಸವʼದ ಅಂಗವಾಗಿ ನಗರದ ಕಂದಗಲ್ ರಂಗ ಮಂದಿರದಲ್ಲಿ ಬಿ.ಸುರೇಶ್‌ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಚಿತ್ರ ವೀಕ್ಷಿಸಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್, “ಸಮಾಜದಲ್ಲಿ ನಡೆಯುತ್ತಿರುವ ಕೋಮುವಾದ ಪರಿಣಾಮ ಬೀರುವುದು ಬಡ ಜನರ ಮೇಲೆಯೇ ಹೊರತು ಶ್ರೀಮಂತ ವ್ಯಕ್ತಿಗಳ ಮೇಲಲ್ಲ. ಪ್ರಗತಿಪರ ಧೋರಣೆಯನ್ನು, ಕೋಮು ಸೌಹಾರ್ದತೆಯ ಬದುಕನ್ನು ನಡೆಸಲು ಪೂರಕವಾಗುವಂತಹ ಸಂದೇಶವನ್ನು ಈ ಸಿನಿಮಾ ಮೂಲಕ ನಿರ್ದೇಶಕರು ತೋರಿಸಿದ್ದಾರೆ” ಎಂದು ಹೇಳಿದರು.

ಆವಿಷ್ಕಾರ ಸಂಘಟನೆಯ ಭರತ್ ಕುಮಾರ್ ಹೆಚ್ ಟಿ ಮಾತನಾಡಿ, “ಸಾಮಾನ್ಯವಾಗಿ ಒಂದು ಕಲೆಯನ್ನ ಅಭಿವ್ಯಕ್ತ ಪಡಿಸುವಾಗ ಕಲಾವಿದ ಅಥವಾ ನಿರ್ದೇಶಕನಾಗಿರಲಿ ತಮ್ಮದೇ ಆದ ವಿಧಾನವನ್ನು ಅನುಸರಿಸಿಕೊಂಡು ಸಂದೇಶವನ್ನು ಕೊಡುತ್ತಾರೆ. ಸಿನಿಮಾದಲ್ಲಿರುವ ಉತ್ತಮವಾದ ಸಂದೇಶವೇನೆಂದರೆ, ಯಾವುದೇ ದೇಶದಲ್ಲಾಗಿರಲಿ, ಯಾವುದೇ ಸಮಾಜದಲ್ಲಾಗಿರಲಿ ಸಮಾಜಘಾತುಕ ಚಟುವಟಿಕೆಗಳಿಗೆ ಬಲಿಪಶುವಾಗುತ್ತಿರುವವರು ಯಾರೋ ಶ್ರೀಮಂತ, ಎಂಎಲ್‌ಎ, ಎಂಪಿ ಮಕ್ಕಳಲ್ಲ. ಬದಲಾಗಿ ಜನಸಾಮಾನ್ಯರ ಮಕ್ಕಳು ಬಲಿಯಾಗುತ್ತಾರೆನ್ನುವ ಸನ್ನಿವೇಶಗಳು ಸಿನಿಮಾದಲ್ಲಿವೆ. ಈ ಸಿನಿಮಾದಲ್ಲಿ ಮುಖ್ಯವಾಗಿ ನಾಯಕಿ ಕೊನೆಯಲ್ಲಿ ನ್ಯಾಯದ ಪರವಾಗಿ ನಿಲ್ಲುವ ಸನ್ನಿವೇಶದಿಂದ ನಾವು ಸಹ ಉನ್ನತ ಮೌಲ್ಯ, ಉನ್ನತ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಸಂದೇಶ ಬಹಳ ಸುಂದರವಾಗಿ ಬಂದಿದೆ.” ಎಂದರು.

Advertisements

ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ

ಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ, ಎಐಎಂಎಸ್‌ಎಸ್ ಜಂಟಿ ಜಿಲ್ಲಾ ಕಾರ್ಯದರ್ಶಿ ಶಿವರಂಜನಿ ಕೆ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X