ಪಿಎನ್‌ಬಿ ವಂಚನೆ ಪ್ರಕರಣ | ಪ್ರಧಾನಿ ಮೋದಿಯವರ ‘ಮೆಹುಲ್ ಭಾಯ್’ ಬಂಧನ; ಹಳೆಯ ವಿಡಿಯೋ ವೈರಲ್

Date:

Advertisements

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. 2018ರಲ್ಲಿ ಚೋಕ್ಸಿ ಭಾರತ ಬಿಟ್ಟು ಪರಾರಿಯಾಗಿದ್ದು, ಕೆಲವು ದಿನಗಳ ಹಿಂದಷ್ಟೇ ಆತ ಬೆಲ್ಜಿಯಂನಲ್ಲಿರುವ ಮಾಹಿತಿ ಲಭಿಸಿ ಬಂಧಿಸಲಾಗಿದೆ. ಇವೆಲ್ಲವುದರ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಥಿಕ ಅಪರಾಧಿ ಮೆಹುಲ್ ಚೋಕ್ಸಿ ನಡುವಿನ ನಂಟಿನ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ. ಜೊತೆಗೆ ಪ್ರಧಾನಿ ಮೋದಿ ‘ಮೆಹುಲ್ ಭಾಯ್‌’ ಎಂದು ಸಂಬೋಧಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಮೋದಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಪಿಎನ್‌ಬಿ ಬ್ಯಾಂಕ್‌ನಿಂದ 6,097.63 ಕೋಟಿ ರೂಪಾಯಿ ಸಾಲ ಪಡೆದಿದ್ದ ಅದನ್ನು ಮರುಪಾವತಿ ಮಾಡದೆಯೇ ದೇಶದಿಂದ ಪರಾರಿಯಾಗಿದ್ದಾರೆ. ಆ ಮೊತ್ತಕ್ಕೆ ಬಡ್ಡಿ ಸೇರಿದರೆ ಈವರೆಗೆ 13,850 ಕೋಟಿ ರೂಪಾಯಿ ವಂಚಿಸಿದ್ದಂತಾಗಿದೆ. ಈ ಬಗ್ಗೆ ಸಿಬಿಐ, ಇಡಿ ತನಿಖೆ ನಡೆದಿದ್ದು ಇದೀಗ ಬೆಲ್ಜಿಯಂನಲ್ಲಿ ಚೋಕ್ಸಿ ಬಂಧನವಾಗಿದೆ. ಆದರೆ ಆರೋಗ್ಯ ಸಮಸ್ಯೆ ಮತ್ತು ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಚೋಕ್ಸಿ ಜಾಮೀನು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.

ಇದನ್ನು ಓದಿದ್ದೀರಾ? 13 ಸಾವಿರ ಕೋಟಿ ಪಿಎನ್‌ಬಿ ಬ್ಯಾಂಕ್ ಸಾಲ ವಂಚನೆ: ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

Advertisements

ಇವೆಲ್ಲವುದರ ನಡುವೆ ಚರ್ಚೆಯಾಗುತ್ತಿರುವುದು ಮೋದಿ ಮತ್ತು ಈ ಆರ್ಥಿಕ ಅಪರಾಧಿಗಳ ನಡುವಿನ ನಂಟು. 2015ರಲ್ಲಿಗುಜರಾತಿ ವ್ಯಾಪಾರಿ ಚೋಕ್ಸಿ ಅವರು ಪ್ರಧಾನಿ ಮೋದಿ ಅಧಿಕೃತ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಜರಾಗಿದ್ದರು. ಗೀತಾಂಜಲಿ ಗ್ರೂಪ್‌ನ ಚೇರ್‌ಮನ್ ಮತ್ತು ಎಂಡಿ ಆಗಿದ್ದ ಚೋಕ್ಸಿ ಕೂತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ವಿರುದ್ಧ ಮೋದಿ ಸರ್‌ನೇಮ್ ಪ್ರಕರಣ; ವಿಚಾರಣೆ ಮೇ 2ಕ್ಕೆ ಮುಂದೂಡಿಕೆ

2015ರ ನವೆಂಬರ್ 5ರಂದು ಈ ಕಾರ್ಯಕ್ರಮವು ನಡೆದಿದೆ. ಈ ಕಾರ್ಯಕ್ರಮದಲ್ಲಿ ದೇಶದಲ್ಲಿ ಚಿನ್ನದ ಭೌತಿಕ ಬೇಡಿಕೆಯನ್ನು ಕಡಿಮೆ ಮಾಡುವುದು ಮತ್ತು ದೇಶದ ಮನೆಗಳು, ಇತರೆ ಸಂಸ್ಥೆಗಳಲ್ಲಿ ಬಳಕೆಯಾಗದೆ ಉಳಿದಿರುವ ಅಂದಾಜು 20,000 ಟನ್ ಚಿನ್ನವನ್ನು ಬಳಸುವ ಗುರಿಯನ್ನು ಹೊಂದಿರುವ ಮೂರು ಯೋಜನೆಗಳನ್ನು ಅನಾವರಣಗೊಳಿಸಲಾಗಿತ್ತು. “ಭಾರತವು ಸುವರ್ಣ ಯುಗದತ್ತ ಸಾಗಲು ಸಹಾಯ ಮಾಡುವ ಸುವರ್ಣಾವಕಾಶವನ್ನು ಜನರು ಬಳಸಿಕೊಳ್ಳಬೇಕು” ಎಂದು ಯೋಜನೆಗಳನ್ನು ಘೋಷಿಸುತ್ತಾ ಮೋದಿ ಹೇಳಿದ್ದರು.

ಹಾಗೆಯೇ, “ಒಬ್ಬ ಖರೀದಿದಾರನು ಆಭರಣಗಳನ್ನು ಖರೀದಿಸಲು ಅತಿದೊಡ್ಡ ಶೋರೂಮ್‌ಗೆ ಹೋಗುತ್ತಾನೆ. ಆದರೆ ಅದನ್ನು ಆತನ ಕುಟುಂಬದ ಆಭರಣ ವ್ಯಾಪಾರಿಯಿಂದಲೇ ಪರಿಶೀಲಿಸುತ್ತಾನೆ. ನಮ್ಮ ಮೆಹುಲ್ ಭಾಯ್ ಇಲ್ಲಿ ಕುಳಿತಿದ್ದಾರೆ. ಖರೀದಿದಾರನು ಆಭರಣವನ್ನು ಪರಿಶೀಲಿಸಲು ತನ್ನವರೇ ಆದ ಆಭರಣ ವ್ಯಾಪಾರಿಯ ಬಳಿ ಹೋಗುತ್ತಾನೆ ಎಂಬುದು ಅವರಿಗೆ ತಿಳಿದಿದೆ” ಎಂದು ಮೋದಿ ನಗುಮುಖದೊಂದಿಗೆ ಹೇಳುವುದು ಈ ವಿಡಿಯೋದಲ್ಲಿ ನೋಡಬಹುದು.

ಸದ್ಯ ಈ ವಿಡಿಯೋ ವಿರೋಧ ಪಕ್ಷಗಳಿಗೆ ದಾಳವಾಗಿದೆ. ದೇಶದಲ್ಲಿ ಆರ್ಥಿಕ ಅಪರಾಧ ನಡೆಸಿ ಪರಾರಿಯಾದ ಬಹುತೇಕ ವ್ಯಾಪಾರಿಗಳೊಂದಿಗೆ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದರು ಎಂಬ ಆರೋಪಗಳೆಲ್ಲವೂ ಮತ್ತೆ ಮುನ್ನಲೆಗೆ ಬರುತ್ತಿದೆ. ಮೋದಿ ಅವರಿಗೆ ಚುನಾವಣೆ ಪ್ರಚಾರಕ್ಕೆ ಅಂಬಾನಿ, ಅದಾನಿ ಮಾತ್ರವಲ್ಲದೆ ಚೋಕ್ಸಿ, ನೀರವ್ ಮೋದಿ ಕೂಡಾ ಧನ ಸಹಾಯ ಮಾಡಿದ್ದರು ಎಂಬ ಆರೋಪಗಳಿವೆ.

ಮೋದಿ ‘ಭಾಯ್’ ಎಂದು ಕರೆದ ಅವರ ಊರಿನವರೇ ಆದ ಗುಜರಾತಿ ವ್ಯಾಪಾರಿ ಚೋಕ್ಸಿ ದೇಶದಿಂದ ಪಲಾಯನವಾಗಿರುವುದು ಮೋದಿ ಆಡಳಿತಾವಧಿಯಲ್ಲೇ. ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಕೊಡುಕೊಳ್ಳುವಿಕೆ ನಡೆದಿದೆಯೇ? ಚೋಕ್ಸಿಯಿಂದ ಲಾಭ ಪಡೆದು ಬಳಿಕ ಕೃತಜ್ಞತೆ ರೂಪಕವಾಗಿ ಅವರನ್ನು ದೇಶದಿಂದ ಪರಾರಿಯಾಗಲು ಮೋದಿ ಬಿಟ್ಟರೇ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿವೆ. ಅದರಲ್ಲೂ ಗುಜರಾತಿಗರನ್ನೇ ಮೋದಿ ಬೆಳೆಸುತ್ತಿರುವ ಆರೋಪಗಳೂ ಇವೆ. ಅದಕ್ಕೆ ಉದಾಹರಣೆ ಉದ್ಯಮಿ ಗೌತಮ್ ಅದಾನಿ.

ಸಣ್ಣ ವ್ಯಾಪಾರಿಯಾಗಿದ್ದ ಗೌತಮ್ ಅದಾನಿ ಪ್ರಸ್ತುತ ವಿಶ್ವದ ಹಲವು ದೇಶಗಳಲ್ಲಿ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ. ತನ್ನ ಸ್ನೇಹಿತ ಅದಾನಿಗೆ ಪ್ರಧಾನಿ ಮೋದಿ ಸಾಕಷ್ಟು ಸಹಾಯ ಮಾಡಿರುವುದು ತಿಳಿದಿರುವ ವಿಚಾರ. ಅದಕ್ಕೆ ಉತ್ತಮ ನಿದರ್ಶನ ವಿಮಾನ ನಿಲ್ದಾಣಗಳ ಗುತ್ತಿಗೆ. ಏರ್‌ಪೋರ್ಟ್‌ಗಳ ಗುತ್ತಿಗೆ ಪಡೆದಿದ್ದು, ಪ್ರಧಾನಿ ಸ್ನೇಹಿತ ಗೌತಮ್ ಅದಾನಿಯವರ ಸಂಸ್ಥೆ. ಹೀಗೆಯೇ ಅದೆಷ್ಟೋ ಗುಜರಾತ್‌ ವ್ಯಾಪಾರಿಗಳ ನಡುವೆ ಮೋದಿ ಸ್ನೇಹವಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಮೋದಿ ಚಕಾರವೂ ಎತ್ತುವುದಿಲ್ಲ. ಇಂದು ಮೆಹುಲ್ ಚೋಕ್ಸಿ ಬಂಧನದ ಬಗ್ಗೆ ಸುದ್ದಿ ಮಾಡುವ ಪತ್ರಿಕೆಗಳು ಚೋಕ್ಸಿ ಭಾರತದಿಂದ ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಮೋದಿ ಬಗ್ಗೆ ಯಾವುದೇ ಪ್ರಶ್ನೆ ಮಾಡದಿರುವುದು ವಿಪರ್ಯಾಸ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X