ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದ ಮೇಲೆ, ಅಂಬೇಡ್ಕರ್ ಚಿಂತನೆಗಳು ಹೋರಾಟಕ್ಕೆ ಪ್ರವೇಶಿಸಿದ ಬಳಿಕ ಆದ ಬಹುಮುಖ್ಯ ಪಲ್ಲಟಗಳು, ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳ ಮುಖಾಮುಖಿ, ಅಂಬೇಡ್ಕರ್‌ವಾದಿ ದಲಿತರು ಮತ್ತು ರೈತ ಸಂಘಟನೆಗಳು ಒಂದಾಗಿ ನಡೆಯಲು ಆದ ಪ್ರಯತ್ನಗಳು ಸೇರಿದಂತೆ ಹಲವಾರು ಸಂಗತಿಗಳನ್ನು ಮೊದಲ ಭಾಗದಲ್ಲಿ ವಿವರಿಸಲಾಗಿತ್ತು. ಮುಂದುವರಿದಂತೆ ದಲಿತ ಚಳವಳಿಯಲ್ಲಾದ ಕವಲುಗಳು, ಅಂಬೇಡ್ಕರ್ ವಿಚಾರಧಾರೆಗೆ ವಿರುದ್ಧವಿರುವ ಸಂಘಪರಿವಾರವು ಕೂಡ ಅಂಬೇಡ್ಕರ್ ಅವರನ್ನು ‘ಅಪ್ರಾಪ್ರಿಯೇಟ್’ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳು ಅಂಬೇಡ್ಕರ್ ಅವರ ಆಶ್ರಯ ಪಡೆದದ್ದು, ಸ್ತ್ರೀವಾದದಲ್ಲಿ…

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.